ಮಂಗಳೂರು: ಬ್ಯಾರಿ ಅಕಾಡಮಿಯಿಂದ 'ಪ್ಯಾಂಟೆ ಪ್ಯಾಂಟೆಲ್ ಬ್ಯಾರಿ ಸಂದಲ್' ಕಾರ್ಯಕ್ರಮ
ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಸುರತ್ಕಲ್-ಕೃಷ್ಣಾಪುರ-ಕಾಟಿಪಳ್ಳದ ಒಂಬತ್ತು ಸ್ಥಳಗಳಲ್ಲಿ ಬ್ಯಾರಿ ಜನಪದ, ಕಲೆ, ಸಂಸ್ಕೃತಿಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಬ್ಯಾರಿ ಸಾಂಸ್ಕೃತಿಕ ರಥದ ಮೂಲಕ 'ಪ್ಯಾಂಟೆ ಪ್ಯಾಂಟೆಲ್ ಬ್ಯಾರಿ ಸಂದಲ್' ಕಾರ್ಯಕ್ರಮ ರವಿವಾರ ನಡೆಯಿತು.
ಸುರತ್ಕಲ್ ವ್ಯಾಪ್ತಿಯ ಎರಡನೇ ಬ್ಲಾಕ್ ಸೈಟ್ ಕಾಟಿಪಳ್ಳ, ಒಂಭತ್ತನೇ ಬ್ಲಾಕ್ ಪದವು, ಚೊಕ್ಕಬೆಟ್ಟು ಶಾಲೆ ಬಳಿ, ಚೊಕ್ಕಬೆಟ್ಟು ಜಂಕ್ಷನ್, 7ನೇ ಬ್ಲಾಕ್ ಕೃಷ್ಣಾಪುರ ಸೊಸೈಟಿ ಬಳಿ, 8ನೇ ಬ್ಲಾಕ್ ಎ ಕುಕ್ಕಾಡಿ, ನೈತಂಗಡಿ, ಕಾಟಿಪಳ್ಳ 2ನೇ ಬ್ಲಾಕ್ ಶಾಲೆ ಬಳಿ, ಕಾಟಿಪಳ್ಳ ಶಂಶುದ್ದೀನ್ ಸರ್ಕಲ್ ಹೀಗೆ ಒಂಭತ್ತು ಸ್ಥಳಗಳಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಬ್ಯಾರಿ ಸಾಂಸ್ಕೃತಿಕ ರಥದ ಮೂಲಕ ಬ್ಯಾರಿ ಸಂಗೀತ ಕಾರ್ಯಕ್ರಮ, ಬ್ಯಾರಿ ಜಾನಪದ ನೃತ್ಯಗಳಾದ ಕೋಲ್ಕಲಿ, ಒಪ್ಪನೆ ಪಾಟ್, ಬ್ಯಾರಿ ದಫ್ ನೃತ್ಯ ಪ್ರದರ್ಶನಗಳು ನಡೆಯಿತು.
ರಾಹೀಸ್ ಕಣ್ಣೂರು ಬಳಗ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿತು. ಬ್ಯಾರಿ ಅಕಾಡಮಿಯ ಮಾಜಿ ಸದಸ್ಯ ಹಸನಬ್ಬ ಮೂಡುಬಿದಿರೆ ಕಾರ್ಯಕ್ರಮ ನಿರೂಪಿಸಿದ್ದರು.