×
Ad

ತೊಕ್ಕೊಟ್ಟು: ಉಚಿತ ಹೊಮಿಯೊಪಥಿ ಚಿಕಿತ್ಸೆ

Update: 2022-03-07 23:01 IST

ಉಳ್ಳಾಲ: ಡಿವೈನ್ ಮೆರ್ಸಿ ಹೊಮಿಯೊ ಕ್ಲಿನಿಕ್ ಮತ್ತು ಕೌನ್ಸೆಲಿಂಗ್ ಸೆಂಟರ್ ತೊಕ್ಕೊಟ್ಟು , ಜೆಸಿಐ ತೊಕ್ಕೊಟ್ಟು ಸ್ಟಾರ್ ರಿಚಲ್ ಚಾರಿಟೇಬಲ್ ಟ್ರಸ್ಟ್ ಭಟ್ನಗರ ಇವುಗಳ ಜಂಟಿ ಆಶ್ರಯದಲ್ಲಿ ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಹೆಣ್ಣು ಮಕ್ಕಳ ಹಾಗೂ ಮಹಿಳಾ ಆರೋಗ್ಯ ಸಮಸ್ಯೆಗಳ ಸಂಬಂಧಿತ ತಪಾಸಣೆ , ಮಾಹಿತಿ ಹಾಗೂ ಉಚಿತ ಹೊಮಿಯೊಪಥಿ ಚಿಕಿತ್ಸೆ ಕಾರ್ಯಕ್ರಮವು ತೊಕ್ಕೊಟ್ಟು ನಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮ ವನ್ನು ಚರ್ಚ್ ಧರ್ಮಗುರು ಸಿಪ್ರಿಯನ್ ಪಿಂಟೊ  ಉದ್ಘಾಟಿಸಿ, ಮಾತನಾಡಿದರು.

ಸಿರಿಲ್ ರಾಬರ್ಟ್ ಡಿಸೋಜ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಜೆಸಿಐ ತೊಕ್ಕೊಟ್ಟು ಸ್ಟಾರ್ ಹರೀಶ್ ಕುಮಾರ್ ಬಿ.ಎಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಸಿ.ಮೇಬಲ್ ಕ್ಲಾರಾ ಡಿಮೆಲ್ಲೊ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡಿಪಾಗಿ ಇಟ್ಟ ಫಿಲೋಮಿನಾ ಫೆರ್ನಾಂಡಿಸ್ ರವರನ್ನು ಸನ್ಮಾನಿಸಿ ನಗದು ರೂಪದಲ್ಲಿ ಧನಸಹಾಯ ನೀಡಿ  ಗೌರವಿಸಲಾಯಿತು.

ಪತ್ರಕರ್ತ ಬಶೀರ್ ಕಲ್ಕಟ್ಟ ರನ್ನು ಸಾಮಾಜಿಕ ಕಳಕಳಿ, ಜನಪರ ಸ್ಪಂದನೆಯನ್ನು ಪರಿಗಣಿಸಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ವಿವಿ ಪ್ರಾಧ್ಯಾಪಕ ಡಾ.ಪ್ರಶಾಂತ್ ನಾಯಕ್, ಜೆ.ಸಿ ಪ್ರತಿಭಾ ಸಾಲಿಯಾನ್,  ಉಳ್ಳಾಲ ನಗರ ಸಭೆ ಸದಸ್ಯ ಮುಸ್ತಾಕ್ ಪಟ್ಲ, ಜೆಸಿಐ ಕೊಣಾಜೆ ಮಂಗಳಾ ಗಂಗೊತ್ರಿ  ನಿಕಟ ಪೂರ್ವ ಅಧ್ಯಕ್ಷ ಪ್ರಾಂಕಿ ಫ್ರಾನ್ಸಿಸ್ ಕುಟಿನ್ಹ, ಡಾ ನಿಶಲ್ ಪ್ರಿಮಾಲ್ ಡಿ ಸೋಜ, ಭಗಿನಿ ಸೆವ್ರಿನ್ ಫೆರ್ನಾಂಡಿಸ್  ಮತ್ತಿತರರು ಉಪಸ್ಥಿತರಿದ್ದರು.

ರಿಷಲ್ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು.ಪ್ಲೇವಿಶ್ ಮೊಂತೆರೊ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News