ಬೆಂಗಳೂರು: ಪೊಲೀಸರ ಬೈಕನ್ನೇ ಕಳವುಗೈದ ಆರೋಪ; ಪ್ರಕರಣ ದಾಖಲು
Update: 2022-03-08 20:32 IST
ಬೆಂಗಳೂರು, ಮಾ.8: ಬ್ಯಾಂಕ್‍ವೊಂದರ ಮುಂದೆ ನಿಲ್ಲಿಸಿದ್ದ ಪೊಲೀಸ್ ಬೈಕ್‍ಅನ್ನೇ ಕಳವುಗೈದ ಘಟನೆ ಕೋರಮಂಗಲದ ಮಹಾರಾಜ ಸಿಗ್ನಲ್ ಬಳಿ ನಡೆದಿದೆ.
ಕೋರಮಂಗಲದ ಮಹಾರಾಜ ಸಿಗ್ನಲ್ ಬಳಿ ಬ್ಯಾಂಕ್ ಮುಂದೆ ನಿಲ್ಲಿಸಿದ್ದ ಪೊಲೀಸರ ಬೈಕ್ ಕಳವು ಮಾಡಿದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೆಎಸ್ಸಾಆರ್ಪಿ 4ನೇ ಬೇಟಾಲಿಯನ್ ಮುಖ್ಯಪೇದೆ ಉಮೇಶ್ ಫೆ.9 ರಂದು ಬ್ಯಾಂಕ್‍ನಲ್ಲಿನ ವ್ಯವಹಾರಕ್ಕಾಗಿ ಬ್ಯಾಂಕ್ ಮುಂದೆ ಬೈಕ್ ನಿಲ್ಲಿಸಿ ಒಳ ಹೋಗಿದ್ದರು. ವಾಪಸ್ ಬರುವಷ್ಟರಲ್ಲಿ ದುಷ್ಕರ್ಮಿಗಳು ಬೈಕ್ ಕಳವು ಮಾಡಿ ಪರಾರಿಯಾಗಿದ್ದು, ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.