×
Ad

ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳಿಗೆ ರ‍್ಯಾಂಕ್

Update: 2022-03-08 21:44 IST

ಮಂಗಳೂರು, ಮಾ.8: ನಗರದ ಶ್ರೀದೇವಿ ಎಜುಕೇಶನ್ ಟ್ರಸ್ಟ್‌ನ ಅಂಗ ಸಂಸ್ಥೆಯಾದ ಕೆಂಜಾರುವಿನಲ್ಲಿರುವ ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ 2020-2021ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ನಡೆಸಿದ ಪರೀಕ್ಷೆಯಲ್ಲಿ ಐದು ರ‍್ಯಾಂಕ್ ಗಳು ದೊರೆತಿದೆ.

ಎಂಟೆಕ್ ಕನ್‌ಸ್ಟ್ರಕ್ಷನ್ ಟೆಕ್ನಾಲಜಿ ವಿಭಾಗದಲ್ಲಿ ನಫೀಝಾ ಮಿನ್ನತ್ ಎಂ.ಟಿ. (2ನೆ ರ‍್ಯಾಂಕ್), ಎಂಬಿಎ (ಮಾಸ್ಟರ್ ಆಫ್ ಬಿಸೆನೆಸ್ ಅಡ್ಮಿನಿಸ್ಟ್ರೇಶನ್) ವಿಭಾಗದಲ್ಲಿ ಸುಶ್ಮಿತಾ ಎಸ್. ಶೆಟ್ಟಿ ಹಾಗೂ ವೈಷ್ಣ ವಿ ಎಸ್. ಶೆಟ್ಟಿ (8ನೆ ರ‍್ಯಾಂಕ್), ಎರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಆಶಾ ಎ. (8ನೆ ರ‍್ಯಾಂಕ್) , ವಿನೋದ್ ಸಿಂಗ್ ಮದನ್ ಸಿಂಗ್ ರಾಜ್‌ಪೂತ್ (9ನೆ ರ‍್ಯಾಂಕ್) ಪಡೆದುಕೊಂಡಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News