×
Ad

ಮಂಗಳೂರು: ವಿಮೆನ್ಸ್ ಫ್ರಂಟ್ ಆಫ್ ಇಂಡಿಯಾದಿಂದ ಭಿತ್ತಿಪತ್ರ ಪ್ರದರ್ಶನ

Update: 2022-03-08 21:51 IST

ಮಂಗಳೂರು, ಮಾ.8:ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ನ್ಯಾಷನಲ್ ವಿಮೆನ್ಸ್ ಫ್ರಂಟ್ ಆಫ್ ಇಂಡಿಯಾದ ಮಂಗಳೂರು ನಗರ ಸಮಿತಿ ಸದಸ್ಯರು ಮತ್ತು ಕಾರ್ಯಕರ್ತರು ಮಂಗಳವಾರ ನಗರದ ಕ್ಲಾಕ್ ಟವರ್ ಬಳಿ ಭಿತ್ತಿಪತ್ರ ಪ್ರದರ್ಶಿಸಿದರು.

ಈ ಸಂದರ್ಭ ಮಾತನಾಡಿದ ವಿಮೆನ್ಸ್ ಫ್ರಂಟ್‌ನ ಜಿಲ್ಲಾ ನಾಯಕಿ ಮುಜಾಹಿದಾ ಕಣ್ಣೂರು ಮಾತನಾಡಿ ಜಗತ್ತಿನ ಎಲ್ಲಾ ಮಹಿಳೆಯರಿಗೆ ಯಾವುದೇ ಜಾತಿ, ಧರ್ಮ, ವರ್ಗ, ಲಿಂಗ ತಾರತಮ್ಯವಿಲ್ಲದೆ ಸಮಾನ ಹಕ್ಕು, ಸಮಾನ ಸ್ವಾತಂತ್ರ್ಯವನ್ನು, ಘನತೆಯಿಂದ ಬದುಕುವ ಹಕ್ಕುಗಳನ್ನು ಸಿಗುವ ವಾತಾವರಣವನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ವಿಮೆನ್ಸ್ ಫ್ರಂಟ್‌ನ ಮಂಗಳೂರು ನಗರ ಅಧ್ಯಕ್ಷೆ ಶಬ್ರೀನಾ, ಕಾರ್ಯದರ್ಶಿ ಶಹನಾಝ್, ನಾಯಕಿಯರಾದ ಸಕೀನಾ ಮಲಾರ್, ತಸ್ರೀನಾ, ತಸ್ಲೀನಾ ಬಿ.ಎಂ., ರಮ್ಲತ್, ನಸೀಮಾ, ಮೈಮುನಾ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News