ಮಾ.10: ವಿದ್ಯುತ್ ವ್ಯತ್ಯಯ
ಮಂಗಳೂರು, ಮಾ.9: ನಗರದ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಯು ಮಾ.10ರಂದು ನಡೆಯಲಿದೆ.
ಹಾಗಾಗಿ ಅಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಬಂದರ್ ಪೊಲೀಸ್ ಸ್ಟೇಷನ್, ಬಾಂಬೆ ಲಕ್ಕಿ ಹೊಟೇಲ್, ಅಝೀಝುದ್ದೀನ್ ರಸ್ತೆ, ಭಟ್ಕಳ್ ಬಜಾರ್, ಅನ್ಸಾರಿ ರಸ್ತೆ, ಕಂಡತ್ ಪಳ್ಳಿ, ಛೇಂಬರ್ ರೋಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಅತ್ತಾವರ: ಅತ್ತಾವರ ಉಪಕೇಂದ್ರದಿಂದ ಹೊರಡುವ ಮುನೀಶ್ವರ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಯು ಮಾ.10ರಂದು ನಡೆಯಲಿದೆ.
ಮಾ.10ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪೊಲೀಸ್ ಲೇನ್, ಪಿಡಬ್ಲ್ಯುಡಿ., ಕಮರ್ಷಿಯಲ್ ಟ್ಯಾಕ್ಸ್ ಕಚೇರಿ ಕೇರಳ ಸಮಾಜ, ಎಂ.ವಿ.ಶೆಟ್ಟಿ, ಓಲ್ಡ್‌ಕೆಂಟ್ ರಸ್ತೆ, ಧೂಮಪ್ಪಕಾಂಪೌಂಡ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಯೆಯ್ಯಡಿ, ವಾಮಂಜೂರು, ಹರಿಪದವು: ನಗರದ ಕಾವೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಯೆಯ್ಯಡಿ, ವಾಮಂಜೂರು, ಹರಿಪದವು ಫೀಡರ್‌ಗಳಲ್ಲಿ ಮಾ.10ರಂದು ತುರ್ತು ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ಬೆಳಗ್ಗೆ 9:30ರಿಂದ ಸಂಜೆ 4:30ರವರೆಗೆ ಮೇರಿಹಿಲ್, ಯೆಯ್ಯೆಡಿ, ಹರಿಪದವು, ಕುಂಟಲ್ಪಾಡಿ, ಕೆಪಿಟಿ, ಉದಯನಗರ, ಲ್ಯಾಂಡ್ ಲಿಂಕ್ಸ್, ಪೆರ್ಲಗುರಿ,ಪದವಿನಂಗಡಿ, ಪಚ್ಚನಾಡಿ, ಕಾರ್ಮಿಕನಗರ, ಮಂಗಳಜ್ಯೋತಿ, ವಾಮಂಜೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ಬೈಕಂಪಾಡಿ: ಬೈಕಂಪಾಡಿ ಉಪಕೇಂದ್ರದಿಂದ ಹೊರಡುವ ಸುರತ್ಕಲ್ ಇಂಡಸ್ಟ್ರಿಯಲ್ ಫೀಡರ್‌ನಲ್ಲಿ ಮಾ.10ರಂದು ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ. ಹಾಗಾಗಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಸುರತ್ಕಲ್, ಕಾನ, ಕಟ್ಲ, ತಡಂಬೈಲ್, ಮುಂಚೂರು, 1ನೇ, 2ನೇ, 3ನೇ, 4ನೇ, 5ನೇ, 6ನೇ, 7ನೇ, 8ನೇ, 9ನೇ, ಕಾಟಿಪಳ್ಳ, ಕುತ್ತೆತ್ತೂರು, ಚೇಳಾರು, ಮಧ್ಯ, ಮುಕ್ಕ, ಸಸಿಹಿತ್ಲು, ಚೊಕ್ಕಬೆಟ್ಟು, ಕೋಟೆ, ಆದರ್ಶನಗರ, ರಾಜೀವನಗರ, ಸೂರಿಂಜೆ, ಶಿಬರೂರು, ಬಾಳ, ಮಂಗಳಪೇಟೆ, ಬಿಎಎಸ್‌ಎಫ್, ಎಚ್‌ಪಿಸಿಎಲ್, ಸ್ಟೀಲ್ ಬ್ಯಾರೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.