×
Ad

ಶ್ರೀನಿವಾಸ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ 6 ರ‍್ಯಾಂಕ್, ಚಿನ್ನದ ಪದಕ

Update: 2022-03-09 22:41 IST

ಮಂಗಳೂರು, ಮಾ.9: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ನಡೆಸಿದ 2020-2021ನೇ ಸಾಲಿನ ಪರೀಕ್ಷೆಯಲ್ಲಿ ನಗರದ ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ 6 ವಿದ್ಯಾರ್ಥಿಗಳು ವಿವಿಧ ವಿಭಾಗಳಲ್ಲಿ ರ‍್ಯಾಂಕ್ ಗಳಿಸಿರುತ್ತಾರೆ.

ನ್ಯಾನೋ ಟೆಕ್ನಾಲಜಿ ವಿಭಾಗದ ನವನೀತ ಗೌಡ ಎಂ. 9.56 ಸಿಜಿಪಿಎ ಅಂಕಗಳನ್ನು ಗಳಿಸುವುದರ ಮೂಲಕ ಪ್ರಥಮ ರ‍್ಯಾಂಕ್ ಮತ್ತು ವಿಟಿಯುನ ಚಿನ್ನದ ಪದಕವನ್ನು ಪಡೆದಿರುತ್ತಾರೆ. ಅದೇ ವಿಭಾಗದಲ್ಲಿ 9.50 ಸಿಜಿಪಿಎ ಅಂಕಗಳನ್ನು ಗಳಿಸಿರುವ ಅನುಷಾ ಬಿ. ಶೆಟ್ಟರ್ ಎರಡನೇ ರ‍್ಯಾಂಕ್ ಪಡೆದಿರುತ್ತಾರೆ.

ಮರೈನ್ ಇಂಜಿನಿಯರಿಂಗ್ ವಿಭಾಗದಲ್ಲಿ 9.11 ಸಿಜಿಪಿಎ ಅಂಕಗಳೊಂದಿಗೆ ಮೃದುಲಾ ಟಿ.ಎಚ್. ಮೂರನೇ ರ‍್ಯಾಂಕ್, 8.90 ಸಿಜಿಪಿಎ ಅಂಕಗಳೊಂದಿಗೆ ಗಣೇಶ್ ಎಂ. ಕಳ್ಳಿಮನಿ ಐದನೇ ರ‍್ಯಾಂಕ್ ಹಾಗೂ 8.78 ಸಿಜಿಪಿಎ ಅಂಕದೊಂದಿಗೆ ನಿಶಾನ್ ಏಳನೇ ರ‍್ಯಾಂಕ್ ಗಳಿಸಿರುತ್ತಾರೆ. ಎಂ.ಸಿ.ಎ. ವಿಭಾಗದಲ್ಲಿ ಕೀರ್ತಿ ನಾರಾಯಣ್ ಪಟಗಾರ್ 9.25 ಸಿಜಿಪಿಎ ಅಂಕದೊಂದಿಗೆ ಮೂರನೇ ರ್ಯಾಂಕನ್ನು ಗಳಿಸಿರುತ್ತಾರೆ.

''ಹೆತ್ತವರ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದಾಗಿ ನನಗೀ ಸಾಧನೆ ಮಾಡಲು ಸಾಧ್ಯವಾಗಿದೆ. ಕಾಲೇಜಿನ ವಾತಾವರಣವೂ ಇದಕ್ಕೆ ಪೂರಕವಾಗಿತ್ತು. ಪ್ರಸ್ತುತ ಇನ್‌ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದು ಭವಿಷ್ಯದಲ್ಲಿ ನೆದರ್‌ಲ್ಯಾಂಡ್ಸ್‌ನ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ನ್ಯಾನೋ ಟೆಕ್ನಾಲಜಿ ವಿಭಾಗದಲ್ಲಿ ಎಂ.ಎಸ್. ಪದವಿ ಪಡೆಯುವ ಕನಸು ಕಂಡಿರುವೆ''
- ನವನೀತ್ ಗೌಡ ಎಂ., 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News