ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್‌ಗೆ 36 ರ‍್ಯಾಂಕ್
ಮಂಗಳೂರು, ಮಾ.9: ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯವು 2016-2020ನೇ ಸಾಲಿನ ದಂತ ವೈದ್ಯಕೀಯ ಪದವಿ (ಬಿಡಿಎಸ್) ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದ್ದು, ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಡೆಂಟಲ್ ಕಾಲೇಜಿನ 36 ವಿದ್ಯಾರ್ಥಿಗಳು ರ‍್ಯಾಂಕ್ ಗಳಿಸಿದ್ದಾರೆ.
ಡಾ.ಶ್ರೇಯಾ ಪ್ರಭು ಬಿಡಿಎಸ್ ವಿಭಾಗದಲ್ಲಿ ಸಮಗ್ರವಾಗಿ 5ನೇ ರ‍್ಯಾಂಕ್, ಒಂದನೇ ಮತ್ತು ಎರಡನೇ ವರ್ಷದ ಬಿಡಿಎಸ್‌ನಲ್ಲಿ ಕ್ರಮವಾಗಿ 4ನೇ ಮತ್ತು 1ನೇ ರ‍್ಯಾಂಕ್ ಪಡೆದಿದ್ದಾರೆ. ಜನರಲ್ ಆನಾಟಮಿಯಲ್ಲಿ 1ನೇ, ಫಿಸಿಯೋಲಜಿ ಆ್ಯಂಡ್ ಬಯೋಕೆಮಿಸ್ಟ್ರಿಯಲ್ಲಿ 5ನೇ, ಫಾರ್ಮಕಾಲಜಿಯಲ್ಲಿ 1ನೇ, ಪಾಥೋಲ್ಯಾಜಿ ಮತ್ತು ಮೈಕ್ರೋಬಯಾಲಜಿಯಲ್ಲಿ 2ನೇ, ಒಎಂಆರ್‌ನಲ್ಲಿ 2ನೇ, ಪೀಡೋಡಾಂಟಿಕ್ಸ್‌ನಲ್ಲಿ 7ನೇ, ಪೇರಿಯೋಡಾಂಟಿಕ್ಸ್ ನಲ್ಲಿ 7ನೇ ರ‍್ಯಾಂಕ್ ಪಡಿದಿರುತ್ತಾರೆ.
ಡಾ. ಕೃತಿಶ್ರೀ ಬಿಡಿಎಸ್ ವಿಭಾಗದಲ್ಲಿ ಸಮಗ್ರವಾಗಿ 8ನೇ ರ‍್ಯಾಂಕ್, ಎರಡನೇ ಮತ್ತು ನಾಲ್ಕನೇ ವರ್ಷದ ಬಿಡಿಎಸ್‌ನಲ್ಲಿ ಐದನೇ ಮತ್ತು ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ. ಜನರಲ್ ಆನಾಟಮಿಯಲ್ಲಿ 4 ನೇ, ಫಾರ್ಮಕಾಲಜಿಯಲ್ಲಿ 2ನೇ, ಪಾಥೋಲ್ಯಾಜಿ ಮತ್ತು ಮೈಕ್ರೋಬಯಾಲಜಿಯಲ್ಲಿ 4ನೇ, ಡೆಂಟಲ್ ಮೆಟಿರಿಯಲ್‌ನಲ್ಲಿ 9ನೇ, ಪ್ರೀ-ಕ್ಲಿನಿಕ್ ಪ್ರಾಸ್ತೋಡಾಂಟಿಕ್‌ನಲ್ಲಿ 9ನೇ, ಒಎಂಆರ್ ನಲ್ಲಿ 2ನೇ, ಪೀಡೋಡಾಂಟಿಕ್ಸ್‌ನಲ್ಲಿ 10ನೇ, ಆರ್‌ಥೋಡಾಂಟಿಕ್ಸ್‌ನಲ್ಲಿ 6ನೇ, ಪೆರಿಯೋಡಾಂಟಿಕ್ಸ್‌ನಲ್ಲಿ 6ನೇ ಪಿಎಚ್‌ಡಿಯಲ್ಲಿ 9ನೇ ರ‍್ಯಾಂಕ್ ಪಡೆದಿರುತ್ತಾರೆ.
ಡಾ.ಘಾದಾ ಜೆ ಅವರು ಒಂದನೇ ವರ್ಷದ ಬಿಡಿಎಸ್‌ನಲ್ಲಿ ಎಂಟನೇ ರ‍್ಯಾಂಕ್ ಪಡೆದಿದ್ದಾರೆ. ಜನರಲ್ ಆನಾಟಮಿಯಲ್ಲಿ 3ನೇ, 9ನೇ, ಪ್ರೀ-ಕ್ಲಿನಿಕ್ ಪ್ರಾಸ್ತೋಡಾಂಟಿಕ್ಸ್ ನಲ್ಲಿ 8ನೇ ರ‍್ಯಾಂಕ್ ಪಡೆದಿರುತ್ತಾರೆ.
ಡಾ. ಚೈಥನ್ಯ ಎನ್ ಒಂದನೇ ವರ್ಷದ ಬಿಡಿಎಸ್‌ನಲ್ಲಿ ಒಂಬತ್ತನೇ ರ‍್ಯಾಂಕ್ ಪಡೆದಿದ್ದಾರೆ. ಜನರಲ್ ಆನಾಟಮಿಯಲ್ಲಿ 6ನೇ, ಫಿಸಿಯೋಲಜಿ ಆ್ಯಂಡ್ ಬಯೋಕೆಮಿಸ್ಟ್ರಿಯಲ್ಲಿ 8ನೇ, ಫಾರ್ಮಕಾಲಜಿಯಲ್ಲಿ 3ನೇ, ಡೆಂಟಲ್ ಮೆಟಿರಿಯಲ್‌ನಲ್ಲಿ 9ನೇ, ಆರ್‌ಥೋಡಾಂಟಿಕ್ಸ್ ನಲ್ಲಿ 4ನೇ, ಪೆರಿಯೋಡಾಂಟಿಕ್ಸ್‌ನಲ್ಲಿ 6ನೇ ಮತ್ತು ಓರಲ್ ಸರ್ಜರಿಯಲ್ಲಿ 9ನೇ ರ‍್ಯಾಂಕ್ ಪಡೆದಿರುತ್ತಾರೆ. ಡಾ. ನಿವೇದಿತಾ ಎಂ.ಪಿ. ಪೆರಿಯೋಡಾಂಟಿಕ್ಸ್ ನಲ್ಲಿ 10ನೇ ರ‍್ಯಾಂಕ್ ಪಡೆದಿರುತ್ತಾರೆ. ಡಾ. ಸುಷ್ಮಾತಾ ಡಿ.ಎಸ್. ಜನರಲ್ ಆನಾಟಮಿಯಲ್ಲಿ 6ನೇ ಮತ್ತು ಪೆರಿಯೋಡಾಂಟಿಕ್ಸ್ ನಲ್ಲಿ 10ನೇ ರ‍್ಯಾಂಕ್ ಪಡೆದಿರುತ್ತಾರೆ. ಡಾ. ಮರಿಯಮ್ ಮಶ್ರೂಫಾ ಒರಲ್ ಸರ್ಜರಿಯಲ್ಲಿ 8ನೇ ರ‍್ಯಾಂಕ್ ಪಡೆದಿರುತ್ತಾರೆ. ಡಾ. ಜಹಾನಾ ಶೆರಿನ್ ಐ ಎಂ ಫಾರ್ಮಕಾಲಜಿಯಲ್ಲಿ 5ನೇ ರ‍್ಯಾಂಕ್ ಪಡೆದಿರುತ್ತಾರೆ. ಡಾ. ಮುಹ್ಮದ್ ಒವೈಸ್ ಸಿದ್ದಿಕಿ ಫಿಸಿಯೋಲಜಿ ಆ್ಯಂಡ್ ಬಯೋಕೆಮಿಸ್ಟ್ರಿಯಲ್ಲಿ 7ನೇ, ಫಾರ್ಮಕಾಲಜಿಯಲ್ಲಿ 6ನೇ ರ‍್ಯಾಂಕ್ ಪಡೆದಿರುತ್ತಾರೆ. ಡಾ. ಪಲ್ಲ ಪಾಟೀಲ್ ಫಾರ್ಮಕಾಲಜಿಯಲ್ಲಿ 10ನೇ ರ‍್ಯಾಂಕ್ ಪಡೆದಿರುತ್ತಾರೆ. ಡಾ. ಅಂಜನಾ ಪ್ರಭಾಕರನ್ ಪ್ರೀ-ಕ್ಲಿನಿಕ್ ಪಾಸ್ತೋಡಾಂಟಿಕ್‌ನಲ್ಲಿ 3ನೇ ರ‍್ಯಾಂಕ್ ಪಡೆದಿರುತ್ತಾರೆ. ಡಾ. ಸಾಕ್ಷಿ ಬುಲ್ಲಾ ಜನರಲ್ ಆನಾಟಮಿಯಲ್ಲಿ 5ನೇ, ಫಾರ್ಮಕಾಲಜಿಯಲ್ಲಿ 7ನೇ ರ‍್ಯಾಂಕ್ ಪಡೆದಿರುತ್ತಾರೆ.