×
Ad

ಚೈಲ್ಡ್ ಲೈನ್-1098ನಿಂದ ಯುಟ್ಯೂಬ್ ಚಾನಲ್‌ಗೆ ಚಾಲನೆ

Update: 2022-03-10 21:23 IST

ಉಡುಪಿ, ಮಾ.10: ಚೈಲ್ಡ್ ಲೈನ್-1098 ಉಡುಪಿಯ 3ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಯುಟ್ಯೂಬ್ ಚಾನಲ್‌ಗೆ ಚಾಲನೆ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನದಲ್ಲಿ ಆಚರಿಸಲಾಯಿತು.

ಮೊದಲಿಗೆ ಚೈಲ್ಡ್‌ಲೈನ್-1098 ಉಡುಪಿಯ ನೂತನ ಯುಟ್ಯೂಬ್ ಚಾನಲ್‌ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎ ್.ಚಾಲನೆ ನೀಡಿ ಶುಭ ಹಾರೈಸಿದರು.

ಚೈಲ್ಡ್‌ಲೈನ್-1098 ಉಡುಪಿಯ 3ನೇ ವರ್ಷದ ವಾರ್ಷಿಕೋತ್ಸವದ ಅಂಗ ವಾಗಿ ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಅಧ್ಯಕ್ಷ ಬಿ.ಕೆ.ನಾರಾಯಣ್, ರೋಟರಿ ಉಡುಪಿಯ ಅಧ್ಯಕ್ಷ ಹೇಮಂತ್ ಯು. ಕಾಂತ್ ಹಾಗೂ ಶ್ರೀಕೃಷ್ಣ ರೋಟರ್ಯಾಕ್ಟ್ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷೆ ಶೃತಿ ಶೆಣೈ ಅವರನ್ನು ಚೈಲ್ಡ್ ಲೈನ್-1098 ಉಡುಪಿಯ ವತಿಯಿಂದ ಗೌರಸಲಾಯಿತು.

ಬಳಿಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ರೋಟರಿ ಉಡುಪಿಯ ನಿಕಟ ಪೂರ್ವ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ್, ಕುಕ್ಕಿಕಟ್ಟೆ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ವಿದ್ಯಾರತ್ನ, ಶ್ರೀಕೃಷ್ಣ ಬಾಲನಿಕೇತನದ ಮಾತಾಜಿ ಶಕುಂತಲಾ ಮತ್ತು ಶಿವಲೀಲಾರನ್ನು ಚೈಲ್ಡ್ ಲೈನ್-1098 ಉುಪಿಯ ವತಿ ಯಿಂದ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಕೃಷ್ಣಬಾಲನಿಕೇತನದ ಆಡಳಿತ ಮಂಡಳಿ ಉಪಾಧ್ಯಕ್ಷ ಪ್ರೊ. ಕೆ.ಕಮಲಾಕ್ಷ, ಸದಸ್ಯರಾದ ಗುರುರಾಜ್ ಸನಿಲ್, ಸುಹಾಸನಿ ಕಾಮತ್, ಶ್ಯಾಮಲ ಪ್ರಸಾದ್ ಹಾಗೂ ರೋಟರಿ ಉಡುಪಿ ಕಾರ್ಯದರ್ಶಿ ಜೆ. ಗೋಪಾಲಕೃಷ್ಣ ಪ್ರಭು, ಸದಸ್ಯರಾದ ಸುರೇಶ್ ಶೆಣೈ, ಸುಬ್ರಮಣ್ಯ ಕಾರಂತ್, ಬಿ.ವಿ.ಲಕ್ಷ್ಮೀ ನಾರಾಯಣ್, ಜನಾರ್ದನ ಭಟ್, ಸ್ಥಳಿಯ ಶಾಲಾ ಶಿಕ್ಷಕರು ಮತ್ತು ಚೈಲ್ಡ್‌ಲೈನ್-1098 ಸಿಬ್ಬಂದಿಗಳು ಉಪಸ್ಥಿತರಿದ್ದರು.

ಚೈಲ್ಡ್‌ಲೈನ್-1098ರನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News