ಕೆಸಿರೋಡ್ ದರ್ಸ್ ವಾರ್ಷಿಕ, ಅನುಸ್ಮರಣೆ ಕಾರ್ಯಕ್ರಮ

Update: 2022-03-10 17:47 GMT

ತಲಪಾಡಿ, ಮಾ.10: ಇಲ್ಲಿಗೆ ಸಮೀಪದ ಕೆಸಿ ರೋಡ್ ಆಲ್ ಮುಬಾರಕ್ ಜುಮಾ ಮಸ್ಜಿದ್ ಇದರ ಮುನವ್ವಿರುಲ್ ಇಸ್ಲಾಮ್ ದರ್ಸ್ ವಾರ್ಷಿಕ ಹಾಗೂ ಸುನ್ನಿ ಕೋ ಆರ್ಡಿನೇಷನ್ ತಲಪಾಡಿ ರೇಂಜ್ ಇದರ ವತಿಯಿಂದ ತಾಜುಶ್ಶರೀಅ ಅಲಿಕುಂಞಿ ಉಸ್ತಾದ್ ಹಾಗೂ ತಾಯಕ್ಕೊಡ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮವು ಬುಧವಾರ ಕೆಸಿ ರೋಡ್ ಆಲ್ ಮುಬಾರಕ್ ಜುಮಾ ಮಸೀದಿಯಲ್ಲಿ ನಡೆಯಿತು.

ಹುಸೈನ್ ಸಅದಿ ಕೆಸಿ ರೋಡ್ ಅದ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಹಿಯ್ಯುದ್ದೀನ್ ಖಾಮಿಲ್ ಸಖಾಫಿ ತೋಕೆ ಮುಖ್ಯ ಪ್ರಭಾಷಣಗೈದರು. ಎಸ್‌ಜಿಎಂ ಅಧ್ಯಕ್ಷ ಬಶೀರ್ ಅಹ್ಸನಿ ಪ್ರಾಸ್ಥಾವಿಕ ಭಾಷಣಗೈದರು. ಕೆಸಿ ರೋಡ್ ಮಸೀದಿಯ ಮುದರ್ರಿಸ್ ಮುನೀರ್ ಸಖಾಫಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News