×
Ad

ಎನ್ ಡಬ್ಲ್ಯೂ ಎಫ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ

Update: 2022-03-11 23:08 IST

ಬಂಟ್ವಾಳ : ನ್ಯಾಷ್‍ನಲ್ ವಿಮೆನ್ಸ್ ಫ್ರಂಟ್ ಬಂಟ್ವಾಳ ವಲಯ ಇದರ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ರಿಕ್ಷಾ ಭವನ ಬಿ.ಸಿ.ರೋಡಿನಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಕೆ. ಸುಜಾತ ಕುಮಾರಿ ಶಿಕ್ಷಣ ಸಂಯೋಜಕಿ ಕ್ಷೇತ್ರ ಶಿಕ್ಷಣಾಧಿಕಾರಿ ಬಂಟ್ವಾಳ, ಝಹನ ಬಂಟ್ವಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಮೆನ್ ಇಂಡಿಯಾ ಮುವ್‍ಮೆಂಟ್, ಅಫ್ರೀನ ಜಿಲ್ಲಾ ಕಾರ್ಯದರ್ಶಿ ನ್ಯಾಷ್‍ನಲ್ ವಿಮೆನ್ಸ್ ಫ್ರಂಟ್ ಬಂಟ್ವಾಳ, ಮುಮ್ತಾಝ್ ವಲಯಾಧ್ಯಕ್ಷರು ನ್ಯಾಷ್‍ನಲ್ ವಿಮೆನ್ಸ್ ಫ್ರಂಟ್ ಬಂಟ್ವಾಳ ಉಪಸ್ಥಿತರಿದ್ದರು.

ಝೀನತ್ ಗೂಡಿನಬಲಿ (ಸ್ಥಳೀಯ ಕೌನ್ಸಿಲರ್ ಮತ್ತು ಮಾಜಿ ರಾಜ್ಯಾಧ್ಯಕ್ಷೆ ನ್ಯಾಷ್‍ನಲ್ ವಿಮೆನ್ಸ್ ಫ್ರಂಟ್) ಅಧ್ಯಕ್ಷತೆ ವಹಿಸಿದರು. ಈ ಕಾರ್ಯಕ್ರಮದಲ್ಲಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಆರೋಗ್ಯ ಕ್ಷೇತ್ರದಲ್ಲಿ ಡಾ. ಫರ್ಹಾನ ಬಿ.ಎ.ಎಮ್.ಎಸ್, ಉತ್ತಮ ಶಕ್ಷಕಿ ಪ್ರಶಸ್ತಿ ಕೆ. ಸುಜಾತ ಕುಮಾರಿ ಶಿಕ್ಷಣ ಸಂಯೋಜಕಿ ಕ್ಷೇತ್ರ ಶಿಕ್ಷಣಾಧಿಕಾರಿ ಬಂಟ್ವಾಳ, ರಾಷ್ಟ್ರಮಟ್ಟದ ಟೇಕ್ವಾಂಡೋ ಕ್ರೀಡೆಯಲ್ಲಿ ಚಿನ್ನದ ಪದಕ ಗಳಿಸಿದ ಫಾತಿಮ ಮುಸ್ಕಾನ್ ಇವರನ್ನು ಸನ್ಮಾನಿಸಲಾಯಿತು.

ಅಫ್ರೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಹನಾಝ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಝುಬೈದ ಧನ್ಯವಾದಗೈದರು.  ಅಝೀಲ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News