ಮಂಗಳೂರು: ಮಹಿಳಾ ಉದ್ಯಮಿ ಆತ್ಮಹತ್ಯೆ
Update: 2022-03-15 20:43 IST
ಮಂಗಳೂರು : ನಗರದ ಖ್ಯಾತ ಬಟ್ಟೆ ಉದ್ಯಮಿ ಪಿ.ಕೆ.ದೂಜ ಪೂಜಾರಿಯ ಸೊಸೆ, ಭೂಮಿಕಾ ಟೆಕ್ಸ್‌ಟೈಲ್‌ನ ಮಾಲಕಿ, ಉದ್ಯಮಿ ಸುಮಾ ಸತೀಶ್ ಮಂಗಳವಾರ ಮನೆಯ ಬಾಲ್ಕನಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬರ್ಕೆ ಪೊಲೀಸರು ತಿಳಿಸಿದ್ದಾರೆ.
ನಗರದ ಮಣ್ಣಗುಡ್ಡ ಅಭಿಮಾನ್ ಮೆನ್‌ಷನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬರ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.