×
Ad

ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ' ಫ್ರೆಶರ್ಸ್‌ ಡೇ 2022ʼ

Update: 2022-03-19 17:07 IST

ಮಂಗಳೂರು: ಯುವ ಇಂಜಿನಿಯರ್  ಪದವೀಧರರು ಉದ್ಯೋಗಾರ್ಥಿಗಳಾಗುವ ಬದಲು ಉದ್ಯೋಗ ನೀಡುವವರಾಗಬೇಕು ಎಂದು ತಮಿಳುನಾಡು ಸರ್ಕಾರದ ಮಾಜಿ ಸಚಿವರಾದ ಕೆ.ಪಾಂಡಿಯರಾಜನ್  ತಿಳಿಸಿದ್ದಾರೆ.

ಅವರು ಇಂದು ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್‌ಮೆಂಟ್‌ನ ' ಫ್ರೆಶರ್ಸ್‌ ಡೇ 2022 ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ  ಮಾತನಾಡುತ್ತಿದ್ದರು.

ಸಹ್ಯಾದ್ರಿ ಯಂತಹ ಶಿಕ್ಷಣ ಸಂಸ್ಥೆಗಳಲ್ಲಿ ಶೈಕ್ಷಣಿಕ ಜ್ಞಾನದ ಜೊತೆಗೆ ಸಾಕಷ್ಟು ಅನುಭವ ಪಡೆದು ಕೊಳ್ಳಲು ಪೂರಕವಾತವರಣವಿದೆ. ಭವಿಷ್ಯದಲ್ಲಿ ಉತ್ತಮ ತಂತ್ರಜ್ಞರಾಗಲು ದೊರೆತಿರುವ ಅವಕಾಶವನ್ನು ವಿದ್ಯಾರ್ಥಿಗಳು ಸದುಪ ಯೋಗ ಪಡಿಸಿಕೊಳ್ಳಬೇಕು ಎಂದರು.

ಶಿವಮೊಗ್ಗದ ಪಿಇಎಸ್ ಟ್ರಸ್ಟ್ ನ, ಸಿಇಒ ಮತ್ತು ಸಲಹಾ ಮಂಡಳಿಯ ಸದಸ್ಯೆ ಉಮಾದೇವಿ ಎಸ್. ವೈ., ಮಹಾರಾಷ್ಟ್ರದ ಕಹಾನಿ ಡಿಸೈನ್ ವರ್ಕ್ಸ್ ನ, ವ್ಯವಸ್ಥಾಪಕ ನಿರ್ದೇಶಕರಾದ ರಾಮನ್ ಮಧೋಕ್ ಮತ್ತು ಬೆಂಗಳೂರಿನ ಈಸ್ಟ್ ವೆಸ್ಟ್ ಗ್ರೂಪ್ ಆಫ್ ಇನ್ಸಿಟ್ಯೂಷನ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ.ನಾಗಭೂಷಣ ಟಿ. ಎನ್. ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್‌ಮೆಂಟ್‌ನ ಸಂಶೋಧನಾ ನಿರ್ದೇಶಕ ಡಾ. ಮಂಜಪ್ಪ ಎಸ್ ಸಮಾರೋಪ  ಮಾತು ಗಳನ್ನಾಡಿದರು. ಪ್ರಾಂಶುಪಾಲ ಡಾ.ರಾಜೇಶ್ ಎಸ್.ಸ್ವಾಗತಿಸಿ, ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಪ್ರಶಾಂತ್ ರಾವ್ ವಂದಿಸಿದರು. ಉಪನ್ಯಾಸಕಿ ಅಕ್ಷಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News