×
Ad

ಮಂಗಳೂರು : ಶೆಫರ್ಡ್ಸ್ ಇಂಟರ್‌ನ್ಯಾಷನಲ್ ಅಕಾಡಮಿಯ ಮೋಂಟೆಸ್ಸೊರಿ-3 ವಿದ್ಯಾರ್ಥಿಗಳ ಪದವಿ ಪ್ರದಾನ

Update: 2022-03-19 23:48 IST

ಮಂಗಳೂರು : ನಗರದ ಅತ್ತಾವರದಲ್ಲಿರುವ ʼದಿ ಶೆಫರ್ಡ್ಸ್ ಇಂಟರ್‌ ನ್ಯಾಷನಲ್ ಅಕಾಡಮಿʼ (ಹಿಕ್ಮಾ ಎಜುಕೇಶನಲ್ ಟ್ರಸ್ಟ್‌ನ ಘಟಕ)ಯ ಮೊಂಟೆಸ್ಸರಿ-3 ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಶನಿವಾರ ನಡೆಯಿತು.‌

ಸಿಟಿ ಆಸ್ಪತ್ರೆಯ ವೈದ್ಯ ಡಾ. ರೋಶನ್ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸಂಸ್ಥೆ ಹಾಗೂ ಶಿಕ್ಷಕರನ್ನು ಪ್ರಶಂಸಿಸಿದರು.

ಶಾಲೆಯ ಅಧ್ಯಕ್ಷ ಮುಹಮ್ಮದ್ ನಿಸಾರ್, ಪ್ರಾಂಶುಪಾಲೆ ಲುಬ್ನಾ ಬಾನು ಹಾಗೂ ಸಿಎಒ ಹಸನ್ ಯೂಸುಫ್ ಉಪಸ್ಥಿತರಿದ್ದರು.

ಸಾಜಿದಾ ಫಾತಿಮಾ ಸ್ವಾಗತಿಸಿದರು. ಮೋಂಟೆಸ್ಸರಿ-3ರ ಅಲಿಝಾ ಖಾಲಿದ್ ಕಾರ್ಯಕ್ರಮ ನಿರೂಪಿಸಿದರು. ಸುಮಯ್ಯಾ ಶೇಖ್ ಹಾಗೂ ಸಮೀರಾ ಶರೀಫ್ ಕಾರ್ಯಕ್ರಮ ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News