×
Ad

ಕಾಟಿಪಳ್ಳ : "ಎಂಇಐಎಫ್" ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ವಾರಾಂತ್ಯ ಶಿಬಿರ

Update: 2022-03-20 22:43 IST

ಮಂಗಳೂರು : ಮುಸ್ಲಿಮ್‌ ಎಜುಕೇಶನಲ್‌ ಇನ್‌ಸ್ಟಿಟ್ಯೂಷನ್ಸ್‌ ಫೆಡರೇಷನ್ (ಎಂಇಐಎಫ್) ದ.ಕ., ಉಡುಪಿ ಜಿಲ್ಲೆ ವತಿಯಿಂದ ಕಾಟಿಪಳ್ಳ ಮಿಸ್ಬಾ ಕಾಲೇಜಿನಲ್ಲಿ ನಡೆಯುತ್ತಿರುವ ಎಸೆಸೆಲ್ಸಿ ವಿದ್ಯಾರ್ಥಿಗಳ ವಿಶೇಷ ವಾರಾಂತ್ಯ ಶಿಬಿರದ ಸಮಾರೋಪ ಸಮಾರಂಭ ರವಿವಾರ ನಡೆಯಿತು.

ಎಸೆಸೆಲ್ಸಿ ವಿದ್ಯಾರ್ಥಿಗಳ ವಿಶೇಷ ವಾರಾಂತ್ಯ ಶಿಬಿರವು ಕಳೆದ 2 ತಿಂಗಳಿಂದ ಕಾಟಿಪಳ್ಳ ಮಿಸ್ಬಾ ಕಾಲೇಜಿನಲ್ಲಿ ನಡೆಯುತ್ತಿದ್ದು, 7 ಪ್ರೌಢಶಾಲೆಗಳ 79 ವಿದ್ಯಾರ್ಥಿಗಳ ವಿಶೇಷ ತರಬೇತಿ ಶಿಬಿರದಲ್ಲಿ ಉಪನ್ಯಾಸಕರಾದ ಅಬ್ದುಲ್ ರಝಾಕ್ ಅನಂತಾಡಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ವಾರಾಂತ್ಯ ಶಿಬಿರದ ತರಬೇತುದಾರರಾಗಿ ವಿನಯಚಂದ್ರ ಮೂಡುಬಿದಿರೆ ಹಾಗು ಅಬೂಬಕರ್ ಅಶ್ರಫ್  ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಿಸ್ಬಾ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ಕಾಟಿಪಳ್ಳ ಇದರ ಅಧ್ಯಕ್ಷರಾದ ಬಿ.ಎಂ. ಮುಮ್ತಾಝ್ ಅಲಿ ಭಾಗವಹಿಸಿ, ಬಹುಮಾನ ವಿತರಿಸಿದರು.

ಎಂಇಐಎಫ್  ಅಧ್ಯಕ್ಷರಾದ ಮೂಸಬ್ಬ ಪಿ ಬ್ಯಾರಿ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಿ.ಎ ಇಲ್ಯಾಸ್ ಕಾಟಿಪಳ್ಳ ಸಂಚಾಲಕರು ನೂರುಲ್ ಹುದಾ, ಸಿರಾಜ್ ಮನೆಗಾರ ಅಧ್ಯಕ್ಷರು ಅಂಜುಮನ್ ಸಂಸ್ಥೆ ಜೋಕಟ್ಟೆ, ಸಂಚಾಲಕರಾದ  ಟಿ ಅಬೂಬಕ್ಕರ್, ಅಲ್ತಾಫ್ ಹುಸೇನ್ ಸಂಚಾಲಕರು ಹಿರಾ ಹೈಸ್ಕೂಲ್, ಫಾರೂಕ್ ಸಂಚಾಲಕರು ಅಂಜುಮನ್ ಮುಕ್ಕ, ಎಂ.ಶಾರೀಕ್ ಆಡಳಿತಾಧಿಕಾರಿ ನೋಬೆಲ್ ಹೈಸ್ಕೂಲ್ ಕುಂಜತ್‌ ಬೈಲ್, ರಿಯಾಝ್ ಅಹ್ಮದ್ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

ಎಂಇಐಎಫ್ ಪ್ರ. ಕಾರ್ಯದರ್ಶಿ ಬಿ.ಎ ನಝೀರ್ ಸ್ವಾಗತಿಸಿ, ಶಿಬಿರ ಸಂಚಾಲಕರಾದ ಬಿ.ಎ ಇಕ್ಬಾಲ್ ಕೃಷ್ಣಾಪುರ ವಂದಿಸಿದರು. ಎಂಇಐಎಫ್ ಮ್ಯಾನೇಜರ್ ಹಕೀಲ್ ಹಸನ್ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News