×
Ad

ಪುತ್ತೂರು ಜಾತ್ರೆ ಸಂತೆ ಏಲಂನಲ್ಲಿ ಭಾಗವಹಿಸಲು ಹಿಂದೂಗಳಿಗೆ ಮಾತ್ರ ಅವಕಾಶ: ಪ್ರಕಟಣೆ

Update: 2022-03-22 19:07 IST

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಎ.10ರಿಂದ 20ರ ತನಕ ನಡೆಯಲಿರುವ ವಾರ್ಷಿಕ ಜಾತ್ರೋತ್ಸವದ ಸಂದರ್ಭ ಜಾತ್ರಾಗದ್ದೆಯ ಸಂತೆ  ಏಲಂನಲ್ಲಿ ಭಾಗವಹಿಸಲು ಹಿಂದೂಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಜಾತ್ರೋತ್ಸವದ ತಾತ್ಕಾಲಿಕ ಸಂತೆ ಏಲಂ ಪ್ರಕಟಣೆಯನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದು, ಈ ಪ್ರಕಟಣೆಯಲ್ಲಿ `ಹಿಂದೂ ಬಾಂಧವರಿಗೆ ಮಾತ್ರ ಏಲಂನಲ್ಲಿ ಭಾಗವಹಿಸಲು ಅವಕಾಶ ಇರುವುದು' ಎಂದು ಉಲ್ಲೇಖಿಸಲಾಗಿದೆ.

ಜಾತ್ರಾ ಸಂದರ್ಭದಲ್ಲಿ ದೇವಳದ ಮುಂಭಾಗದಲ್ಲಿರುವ ಗದ್ದೆಯಲ್ಲಿ ತಾತ್ಕಾಲಿಕ ಅಂಗಡಿ ವ್ಯಾಪಾರಿಗಳಿಗೆ ದೇವಳದ ಕಚೇರಿಯಿಂದ ಸೂಚಿಸಿದ ಪ್ರಕಾರ ಗುರುತಿಸಿದ ಜಾಗವನ್ನು ಹಂಚಿಕೆ ಮಾಡಿಕೊಡುವ ಸಲುವಾಗಿ ಮಾ. 29ರಂದು ಪೂರ್ವಾಹ್ನ 11 ಗಂಟೆಗೆ ಕೆಲವು ಷರತ್ತುಗಳಿಗೆ ಒಳಪಟ್ಟು ದೇವಳದ ಸಭಾಭವನದಲ್ಲಿ ಏಲಂ ನಡೆಸಲಾಗುತ್ತಿದೆ.

ದೇವಳದ ಎದುರು ಮೈದಾನದ ಅನ್ನಛತ್ರದ ಹಿಂಬದಿಯಲ್ಲಿ ಗುರುತಿಸಿದ ಜಾಗವನ್ನು ಮಾ.31ರಂದು ಪೂವಾಹ್ನ 11 ಗಂಟೆಗೆ ಕೆಲವು ಷರತ್ತುಗಳಿಗೆ ಒಳಪಟ್ಟು ದೇವಳದ ಸಭಾಭವನದಲ್ಲಿ ಏಲಂ ನಡೆಸಲಾಗುತ್ತಿದೆ. ಹಿಂದೂ ಬಾಂಧವರಿಗೆ ಮಾತ್ರ ಏಲಂನಲ್ಲಿ ಭಾಗವಹಿಸಲು ಅವಕಾಶವನ್ನು ನೀಡಲಾಗಿದೆ. ಪುತ್ತೂರು ಜಾತ್ರೋತ್ಸವದಲ್ಲಿ ಈ ಹಿಂದೆಯೂ ಜಾತ್ರೆಯಲ್ಲಿ ಸಂತೆ ವ್ಯಾಪಾರ ನಡೆಸಲು ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಲು ಹಿಂದೂಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News