×
Ad

ಮಂಗಳೂರು : ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್ ಅಮಾನತು

Update: 2022-03-22 21:11 IST

ಮಂಗಳೂರು : ಸಂಚಾರ ಉತ್ತರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮುಹಮ್ಮದ್ ಶರೀಫ್‌ರನ್ನು ಮಂಗಳವಾರ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಲಾಗಿದೆ.

ಮುಹಮ್ಮದ್ ಶರೀಫ್ ಇಲಾಖೆಯ ಹಿರಿಯ ಅಧಿಕಾರಿಗಳ ಅನುಮತಿ ಪಡೆಯದೆ ವಿದೇಶ ಪ್ರವಾಸ ಮಾಡಿರುವ ಹಿನ್ನೆಲೆಯಲ್ಲಿ ಅಮಾನತುಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮಾ.16ರಿಂದ ಅಜ್ಮೀರ್ ಪ್ರವಾಸ ಮಾಡುವುದಾಗಿ ರಜೆ ಪಡೆದು ಬಳಿಕ ದುಬೈಗೆ ತೆರಳಿದ್ದರು. ವಿದೇಶ ಪ್ರವಾಸ ಮಾಡುವುದಾದರೆ ಡಿಜಿಪಿ ಅವರಿಂದ ಪೂರ್ವ ಅನುಮತಿ ಪಡೆಯಬೇಕಾಗಿದೆ. ಸೋಮವಾರ ಮಂಗಳೂರಿಗೆ ಹಿಂತಿರುಗಿದ್ದರು. ಮುಂದಿನ ಆದೇಶದ ತನಕ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News