ಸದಾ ವಾಹನಗಳ ತಪಾಸಣೆ ಅತ್ಯಗತ್ಯ: ಡಿಸಿ ಡಾ. ರಾಜೇಂದ್ರ
ಮಂಗಳೂರು : ವಾಹನಗಳಿಂದಲೇ ಅತೀ ಹೆಚ್ಚು ಪರಿಸರ ಮಾಲಿನ್ಯವಾಗುತ್ತಿದ್ದು, ಅದನ್ನು ನಿಯಂತ್ರಿಸಲು ಕಮ್ಯೂನಿಟಿ ವಾಹನ, ಇಲೆಕ್ಟ್ರಿಕಲ್ ವಾಹನ, ಸೈಕಲ್ ಬಳಕೆ, ವಾಹನಗಳ ಸದಾ ತಪಾಸಣೆ, ಹಳೆಯ ವಾಹನಗಳ ವಿಲೇವಾರಿ ಮಾಡಬೇಕು ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.
ನಗರದ ಕದ್ರಿಯ ಮಹಿಳಾ ಐಟಿಐನಲ್ಲಿ ಸಾರಿಗೆ ಇಲಾಖೆ ಆಶ್ರಯದಲ್ಲಿ ಸೋಮವಾರ ನಡೆದ ವಾಯುಮಾಲಿನ್ಯ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಸಂದರ್ಭ ವಾಯು ಮಾಲಿನ್ಯ ತಡೆ ಸಂಬಂಧಿಸಿದ ಎರಡು ಕಿರು ಹೊತ್ತಿಗೆಗಳನ್ನು ಅನಾವರಣ ಗೊಳಿಸಲಾಯಿತು.
ಮಂಗಳೂರು ನಗರ ಎಸಿಪಿ ಎಂ.ಎ. ನಟರಾಜ್ ಮಾತನಾಡಿ, ರಾಜ್ಯದಲ್ಲಿ ಎರಡನೇ ಅತೀ ಹೆಚ್ಚು ಇಲೆಕ್ಟ್ರಿಕ್ ವಾಹನಗಳ ಬಳಕೆ ಮಂಗಳೂರಿನಲ್ಲಿವೆ. ಈಗಾಗಲೇ ಬಿಎಸ್-೪ ಮಾದರಿ ಪೆಟ್ರೋಲ್ ಬಿಡಗಡೆ ಮಾಡಿದ್ದು, ಅದಕ್ಕೆ ಪೂರಕ ಹೊಸ ವಾಹನಗಳು ಬರುತ್ತಿವೆ ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್.ಎಂ.ವರ್ಣೇಕರ್, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಎಚ್. ಹೊಳೆಯಪ್ಪ, ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ ಅಧ್ಯಕ್ಷ ಕೆ.ಪಿ. ಮಂಜುನಾಥ್ ಸಾಗರ್ ಮಾತನಾಡಿದರು,
ಕಾರ್ಪೊರೆಟರ್ ಶಕೀಲಾ ಕಾವ, ಸಂಸ್ಥೆಯ ಪ್ರಾಂಶುಪಾಲ ಬಾಲಕೃಷ್ಣ ಎ., ಲೀಲಾಧರ ಬೈಕಂಪಾಡಿ ಉಪಸ್ಥಿತರಿ ದ್ದರು. ಕಲಾವಿದ ಶಿವಕುಮಾರ್ ಸ್ವಾಗತಿಸಿದರು. ಐಟಿಐ ತರಬೇತಿ ಅಧಿಕಾರಿ ಶಿವಕುಮಾರ್ ವಂದಿಸಿದರು.