ಮಾ.23: ನೀರು ಪೂರೈಕೆ ಸ್ಥಗಿತ
Update: 2022-03-22 22:47 IST
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಎಚ್‌ಎಲ್‌ಪಿಎಸ್ -1-18 ಎಂಜಿಡಿ ರೇಚಕ ಸ್ಥಾವರದಿಂದ ಹಿಲ್‌ಟಾಪ್ ಟ್ಯಾಂಕ್‌ಗೆ ಪಂಪಿಂಗ್ ಮಾಡುವ ಮುಖ್ಯ ಕೊಳವೆಯಲ್ಲಿ ಸೋರಿಕೆ ಉಂಟಾಗಿದ್ದು, ಅದರ ದುರಸ್ತಿಯು ಮಾ.23ರಂದು ನಡೆಯಲಿದೆ.
ಹಾಗಾಗಿ ಮಾ.23ರ ಬೆಳಗ್ಗೆ 6ರಿಂದ ಮಾ.24ರ ಬೆಳಗ್ಗೆ 6ರವರೆಗೆ ಸುರತ್ಕಲ್, ಕಾಟಿಪಳ್ಳ, ಎನ್‌ಎಂಪಿಟಿ, ಎಂಸಿಎಫ್, ಕೂಳೂರು, ಕಾವೂರು, ಕೋಡಿಕಲ್, ಪಿವಿಎಸ್, ಲೇಡಿಹಿಲ್, ಬಂದರು ಮತ್ತಿತರ ಪ್ರದೇಶಗಳಿಗೆ ನೀರು ಸಂಪೂರ್ಣ ಸ್ಥಗಿತಗೊಳ್ಳಲಿದೆ ಎಂದು ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರರ ಪ್ರಕಟನೆ ತಿಳಿಸಿದೆ.