×
Ad

ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಹುಟ್ಟುಹಬ್ಬ ಆಚರಣೆ

Update: 2022-03-23 20:00 IST

ಮಂಗಳೂರು: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ೧೩೬ನೆಯ ಹುಟ್ಟುಹಬ್ಬವನ್ನು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಬುಧವಾರ ಪ್ರತಿಷ್ಠಾನದ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರತಿಷ್ಠಾನ ಅಧ್ಯಕ್ಷ ಹಾಗೂ ದ.ಕ.ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ರಾಷ್ಟ್ರಕವಿ ಗೋವಿಂದ ಪೈಯ ಅಸಾಧಾರಣ ಸಾಹಿತ್ಯ ಸೇವೆ ಮತ್ತವರ ಕನ್ನಡ ಪರ ಹೋರಾಟವು ಯುವ ಪೀಳಿಗೆಗೆ ದಾರಿದೀಪವಾಗಬೇಕು ಎಂದು ಆಶಿಸಿದರು.

ಸಾಹಿತಿಗಳಾದ ಡಾ.ಎಂ.ಪ್ರಭಾಕರ ಜೋಶಿ, ನಿತ್ಯಾನಂದ ಕಾರಂತ ಪೊಳಲಿ, ವಿಶ್ವ ಕೊಂಕಣಿ ಕೇಂದ್ರದ ಗುರುದತ್ತ್ ಬಂಟ್ವಾಳಕರ್ ಮಾತನಾಡಿದರು.

ಗೋವಿಂದ ಪೈಯ ಕಾವ್ಯ ಮತ್ತು ಸಾಹಿತ್ಯವು ಹೈಸ್ಕೂಲ್, ಕಾಲೇಜು ಪಠ್ಯ ಪುಸ್ತಕಗಳಲ್ಲಿ ಮೂಡಿಬರಬೇಕೆಂದು ಸರಕಾರವನ್ನು ಒತ್ತಾಯಿಸುವ ಠರಾವನ್ನು ಸಭೆ ಅಂಗೀಕರಿಸಿತು.

ಗಡಿನಾಡು ಸಾಹಿತ್ಯ ಅಕಾಡಮಿಯ ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಸ್ವರಚಿತ ಕವನವನ್ನು ವಾಚಿಸಿದರು. ಕೂಟ ಮಹಾಜಗತ್ತು ಅಧ್ಯಕ್ಷ ಚಂದ್ರಶೇಖರ ಮಯ್ಯ, ಸಾಮಾಜಿಕ ಧುರೀಣ ಗೋಪಾಲ ಶೆಟ್ಟಿ ಅರಿಬೈಲು, ಗೆಳೆಯರ ಬಳಗ ಸಾಲಿಗ್ರಾಮದ ತಾರಾನಾಥ ಹೊಳ್ಳ, ಕಾಸರಗೋಡು ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ಅಬ್ಬುಲ್ ರಹ್ಮಾನ್ ಸುಬ್ಬಯಕಟ್ಟೆ, ವಾಗೀಶ್ವರಿ ಯಕ್ಷಗಾನ ಮಂಡಳಿಯ ಸಂಜಯ ಕುಮಾರ್, ಮಂಗಳೂರು ತಾಲೂಕು ಕಸಾಪ ಅಧ್ಯಕ್ಷ ಮಂಜುನಾಥ ರೇವಣ್‌ಕರ್, ಸುಖಾಲಾಕ್ಷಿ ಸುವರ್ಣ ಉಪಸ್ಥಿತರಿದ್ದರು. ಡಾ. ಮಂಜುಳಾ ಶೆಟ್ಟಿ ಸ್ವಾಗತಿಸಿದರು. ವಿಜಯಲಕ್ಷ್ಮಿ ಶೆಟ್ಟಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News