ಮಾ.28, 29ರಂದು ನಡೆಯಲಿರುವ ಮುಷ್ಕರ ಪ್ರಯುಕ್ತ ಮಂಗಳೂರಿನಲ್ಲಿ ಪಾದಯಾತ್ರೆ
Update: 2022-03-26 23:46 IST
ಮಂಗಳೂರು : ಕೇಂದ್ರ ಕಾರ್ಮಿಕ ಸಂಘಟನೆಗಳ ನೇತ್ರತ್ವದಲ್ಲಿ ಮಾರ್ಚ್ 28,29ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮಹಾಮುಷ್ಕರದ ಸಂದೇಶವನ್ನು ಸಾರಲು ಮಂಗಳೂರು ನಗರದಲ್ಲಿ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಯಿತು.
ಪಾದಯಾತ್ರೆಯ ಉದ್ಘಾಟನೆಯನ್ನು ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ರಾಜ್ಯಾಧ್ಯಕ್ಷರಾದ ಕಾ.ಕೆ ರಾಘವರವರು ನೆರವೇರಿಸಿದರು.
ಈ ಸಂಧರ್ಭದಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ನಾಯಕರಾದ ಜೆ.ಬಾಲಕ್ರಷ್ಣ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಎಚ್.ವಿ.ರಾವ್, ಸೀತಾರಾಮ ಬೇರಿಂಜ, ಕರುಣಾಕರ್,ವಿ.ಕುಕ್ಯಾನ್, ಪ್ರವೀಣ್, ಯೋಗೀಶ್ ಜಪ್ಪಿನಮೊಗರು, ಜಯಂತಿ ಶೆಟ್ಟಿ,ಭಾರತಿ ಬೋಳಾರ, ಮುಸ್ತಫಾ,ನಾಗೇಶ್ ಕೋಟ್ಯಾನ್, ಜಯಲಕ್ಷ್ಮಿ, ಬ್ಯಾಂಕ್ ನೌಕರರ ಸಂಘಟನೆಯ ನಾಯಕರಾದ ಫಣೀಂದ್ರ, ಸುರೇಶ್ ಹೆಗ್ಡೆ, ಸದಾಶಿವ, ಪುರುಷೋತ್ತಮ ಪೂಜಾರಿ, ವಿವಿಧ ಸಂಘಟನೆಗಳ ಮುಖಂಡರಾದ ಡಾ.ಕೃಷ್ಣಪ್ಪ ಕೊಂಚಾಡಿ, ಸಂತೋಷ್ ಬಜಾಲ್ ಮುಂತಾದವರು ಉಪಸ್ಥಿತರಿದ್ದರು.