×
Ad

ಸುರತ್ಕಲ್: ಇಬ್ಬರು ಮಕ್ಕಳ ಜೊತೆ ತಾಯಿ ನಾಪತ್ತೆ

Update: 2022-03-29 10:43 IST

ಸುರತ್ಕಲ್, ಮಾ.29: ಇಬ್ಬರು ಮಕ್ಕಳೊಂದಿಗೆ ತಾಯಿ ಮನೆಯಿಂದ ನಾಪತ್ತೆಯಾಗಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.

ಕೊಪ್ಪಳ ಮೂಲದ ಹನುಮಂತ ಎಂಬವರ ಪತ್ನಿ ಭಾರತಿ ಹಾಗೂ 11 ವರ್ಷದ ಮಗಳು ಹಾಗೂ 9 ವರ್ಷದ ಮಗ ನಾಪತ್ತೆಯಾಗಿರುವುದಾಗಿ ಹನುಮಂತ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಹನುಮಂತ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕಾಟಿಪಳ್ಳದ  ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. "ಮಾ.21ರಂದು ರಾತ್ರಿ 8 ಗಂಟೆಯ ಸುಮಾರಿಗೆ ನಾನು ಮಲಗಿದ್ದ ವೇಳೆ ನನ್ನ ಪತ್ನಿ ಭಾರತಿ ಮಾದರ ಮತ್ತು 11 ವರ್ಷದ ಮಗಳು ಹಾಗೂ 9 ವರ್ಷದ ಮಗನೊಂದಿಗೆ ಮುಂಬಾಗಿಲಿನ ಚಿಲಕ  ಹೊರಗಿನಿಂದ ಹಾಕಿ ಹೋದವರು  ವಾಪಸ್ ಹಿಂದಿರುಗಿ ಬಂದಿಲ್ಲ"  ಎಂದು ಹನುಮಂತ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ‌ ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಪೊಲೀಸರು ಭಾರತಿ ಮತ್ತು ಅವರ ಮಕ್ಕಳ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News