ಉಳ್ಳಾಲ: ಎಸ್‌ವೈಎಸ್ ವತಿಯಿಂದ ಕುಟುಂಬ ನಿರ್ವಹಣೆಗೆ ಚೆಕ್ ವಿತರಣೆ
Update: 2022-03-29 21:52 IST
ಉಳ್ಳಾಲ: ಎಸ್‌ವೈಎಸ್ ತೊಕ್ಕೊಟ್ಟು ಬ್ರಾಂಚ್ ವತಿಯಿಂದ ಬಡ ಕುಟುಂಬದ ನಿರ್ವಹಣೆಗೆ ಚೆಕ್ ವಿತರಣಾ ಕಾರ್ಯಕ್ರಮ ತೊಕ್ಕೊಟ್ಟು ತಾಜುಲ್ ಉಲಮಾ ಜುಮಾ ಮಸ್ಜಿದ್‌ನಲ್ಲಿ ರವಿವಾರ ನಡೆಯಿತು.
ಎಸ್‌ವೈಎಸ್ ಬ್ರಾಂಚ್ ಉಪಾಧ್ಯಕ್ಷ ಬಶೀರ್ ಪಿಲಾರ್ ಅಧ್ಯಕ್ಷತೆ ವಹಿಸಿದ್ದರು. ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಕೋಶಾಧಿಕಾರಿ ನಿಝಾಮ್ ಷಾ ಕೋಟೆಪುರ ಉದ್ಘಾಟಿಸಿದರು.
ಎಸ್ ಎಸ್ ಎಫ್ ಮುಕಚೇರಿ ಬ್ರಾಂಚ್ ಮಾಜಿ ಅಧ್ಯಕ್ಷ ಯೂಸುಫ್ ಹನೀಫಿ ಪ್ರಸ್ತಾವನೆಗೈದರು. ಎಸ್ ಎಸ್ ಎಫ್ಉಳ್ಳಾಲ ಸೆಕ್ಟರ್ ರೈಂಬೊ ಕಾರ್ಯದರ್ಶಿ ನಿಝಾಮ್ ಉಳ್ಳಾಲ ಚೆಕ್ ವಿತರಣೆ ಮಾಡಿದರು. ಅಲ್ತಾಫ್ ಕುಂಪಲ ಸ್ವಾಗತಿಸಿ, ವಂದಿಸಿದರು.