×
Ad

ಫಿಫಾ ವಿಶ್ವಕಪ್‍ಗೆ ಬೆಂಗಳೂರಿನ ಬೈಜೂಸ್ ಪ್ರಾಯೋಜಕತ್ವ

Update: 2022-03-30 07:51 IST
ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್

ಬೆಂಗಳೂರು: ವಿಶ್ವದ ಅತಿದೊಡ್ಡ ಎಜ್ಯುಟೆಕ್ ಕಂಪನಿಯಾಗಿರುವ ಭಾರತದ ಬೈಜೂಸ್ ಇದೀಗ ವಿಶ್ವದ ಅತಿದೊಡ್ಡ ಕ್ರೀಡಾಕೂಟದ ಪ್ರಾಯೋಜಕತ್ವ ಜೋಡಿಸಿಕೊಂಡಿದೆ.

ಬೆಂಗಳೂರು ಮೂಲದ ಬೈಜೂಸ್ ಅನ್ನು ಇದೀಗ ಕತರ್ ನಲ್ಲಿ ನಡೆಯುವ ಫಿಫಾ ವಿಶ್ವಕಪ್-2022ನ ಅಧಿಕೃತ ಪ್ರಾಯೋಜಕ ಎಂದು ಪ್ರಕಟಿಸಲಾಗಿದೆ.

"ಈ ಪಾಲುದಾರಿಕೆಯ ಮೂಲಕ ಬೈಜೂಸ್, ಫಿಫಾ ವಿಶ್ವಕಪ್-2022ರ ಎಲ್ಲ ಸಂಕೇತ, ಲಾಂಛನ ಮತ್ತು ಆಸ್ತಿಗಳ ಹಕ್ಕನ್ನು ಪಡೆಯಲಿದೆ ಹಾಗೂ ವಿಶ್ವಾದ್ಯಂತ ಫುಟ್‍ಬಾಲ್ ಅಭಿಮಾನಿಗಳನ್ನು ಈ ಕ್ರೀಡೆಯ ಮೂಲಕ ತಲುಪಲು ಪ್ರಚಾರ ನಡೆಸಲಿದೆ" ಎಂದು ಕಂಪನಿಯ ಪ್ರಕಟಣೆ ಹೇಳಿದೆ.

ಬೈಜೂಸ್ ಕೆ-12, ಪ್ರವೇಶ ಪರೀಕ್ಷೆ ಮತ್ತು ವೈಯಕ್ತಿಕ ವೃತ್ತಿಪರ ಕೌಶಲವೃದ್ಧಿಗೆ ವಿಶೇಷ ಕೋರ್ಸ್‍ಗಳನ್ನು ನೀಡುತ್ತಿದ್ದು, ಮೆಕ್‍ ಡೊನಾಲ್ಡ್ಸ್, ವಿವೊ, ಹಿಸ್ಸೆನ್ಸ್ ಮತ್ತು ಬುಡ್‍ವೈಸರ್‍ಗೆ ಹೋಲಿಸಿದರೆ ಪ್ರಾಯೋಜಕರ ಪೈಕಿ ಅತ್ಯಂತ ಯುವ ಕಂಪನಿ ಎನಿಸಿಕೊಂಡಿದೆ.

ಬೈಜೂಸ್ ಕ್ರೀಡಾ ಪ್ರಾಯೋಜಕತ್ವ ಇದೇ ಮೊದಲಲ್ಲ. ಕಂಪನಿಯು ಈಗಾಗಲೇ ಭಾರತದ ಪುರುಷರ ಮತ್ತು ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಪ್ರಾಯೋಜಕತ್ವ ವಹಿಸಿಕೊಂಡಿದ್ದು, ರಾಷ್ಟ್ರೀಯ ತಂಡದ ಜೆರ್ಸಿಗಳಲ್ಲಿ ಕಂಪನಿಯ ಲೋಗೊ ಇದೆ.

"ಭಾರತದಲ್ಲಿ ಕ್ರಿಕೆಟ್, ಮುಂಬರುವ ಕ್ರೀಡಾಕೂಟಗಳಲ್ಲಿ ಹೂಡಿಕೆ ಮಾಡಲು ಅಗತ್ಯವಾದ ಕಠಿಣ ಪರಿಶ್ರಮ, ವಿಶ್ಲೇಷಣೆ ಮತ್ತು ಸಂಶೋಧನೆ ವೆಚ್ಚವನ್ನು ಬೈಜೂಸ್‍ಗೆ ಉಳಿಸಲಿದೆ ಎಂದು ಕ್ರಿಕೆಟ್ ವೀಕ್ಷಕ ವಿವರಣೆಗಾರ ಮತ್ತು ಪ್ರೊ ಕಬಡ್ಡಿ ಲೀಗ್‍ನ ನಿರ್ದೇಶಕ ಚಾರು ಶರ್ಮಾ ಹೇಳುತ್ತಾರೆ. ಹೊರದೇಶಗಳಲ್ಲಿ ಫುಟ್ಬಾಲ್‍ನ ಜನಪ್ರಿಯತೆ ಮ್ಯಾಜಿಕ್ ಮಾಡಬಲ್ಲದು.

ಇದು ದುಬಾರಿ ಒಪ್ಪಂದವಾಗಿದ್ದು, 30- 40 ದಶಲಕ್ಷ ಡಾಲರ್ ವೆಚ್ಚ ಮಾಡಬೇಕಾಗುತ್ತದೆ. ಆದರೆ ಬೈಜೂಸ್‍ಗೆ ಇದನ್ನು ಭರಿಸುವ ಸಾಮರ್ಥ್ಯ ಇದೆ. ಇದು ಭಾರತ ಹಾಗೂ ಹೊರದೇಶಗಳಲ್ಲಿ ಹಲವು ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿದೆ. ಕಂಪನಿ ಈ ವರ್ಷ ಸುಲಭವಾಗಿ 10 ಸಾವಿರ ಕೋಟಿ ಆದಾಯವನ್ನು ಗಳಿಸಬಲ್ಲದು ಎನ್ನುವುದು ಬೈಜೂಸ್ ಸಂಸ್ಥಾಪಕ ಬೈಜು ರವೀಂದ್ರನ್ 2021ರ ಆಗಸ್ಟ್ ನಲ್ಲಿ ಹೇಳಿದ್ದರು. ಕಂಪನಿ ಇತೀಚೆಗೆ 800 ದಶಲಕ್ಷ ಡಾಲರ್ ಮೊತ್ತವನ್ನು 22 ಶತಕೋಟಿ ಮೌಲ್ಯಮಾಪನದಲ್ಲಿ ಐಪಿಓ ಪೂರ್ವ ಸುತ್ತಿನಲ್ಲಿ ಕ್ರೋಢೀಕರಿಸಿತ್ತು.‌

ಬೈಜೂಸ್ 15 ಕೋಟಿ ಕಲಿಕಾರ್ಥಿಗಳನ್ನು ಹೊಂದಿದ್ದು, ನವೆಂಬವರ್ 21ರಿಂದ ಡಿಸೆಂಬರ್ 18ರ ನಡುವೆ ನಡೆಯುವ ಹಲವು 90 ನಿಮಿಷಗಳ ಪಂದ್ಯಗಳಲ್ಲಿ ಕೋಟ್ಯಂತರ ಜನರನ್ನು ತಲುಪಲಿದೆ. 2018ರ ವಿಶ್ವಕಪ್‍ನಲ್ಲಿ ಇಡೀ ವಿಶ್ವದ ಜನಸಂಖ್ಯೆಯಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News