×
Ad

ಮಂಗಳೂರು : ಟೊಯೋಟಾ ಗ್ಲಾಂಝ್ಹಾ ಹೊಸ ಮಾದರಿ ಕಾರು ಅನಾವರಣ

Update: 2022-03-31 23:18 IST

ಮಂಗಳೂರು : ವಿಶ್ವದ ದಿಗ್ಗಜ ಕಾರು ಉತ್ಪಾದಕ ಸಂಸ್ಥೆ ಟೊಯೋಟಾದ ಕಾರುಗಳನ್ನು ಗ್ರಾಹಕರಿಗೆ ಪೂರೈಸುತ್ತಿರುವ ಅತ್ಯುನ್ನತ ಸೇವೆಗೆ ಹೆಸರಾದ ಭರವಸೆಯ ಸಂಸ್ಥೆ ಮಂಗಳೂರಿನ ಯುನೈಟೆಡ್ ಟೊಯೋಟಾ ಸಂಸ್ಥೆಯಲ್ಲಿ ಟೊಯೋಟಾದ ವಿನೂತನ ಗ್ಲಾಂಝ್ಹಾ ಕಾರನ್ನು ಗುರುವಾರ ಅನಾವರಣಗೊಳಿಸಲಾಯಿತು.

ತುಳು ಚಿತ್ರರಂಗದ ಖ್ಯಾತ ನಾಯಕ ನಟ ರೂಪೇಶ್ ಶೆಟ್ಟಿ ಹೊಸ ಕಾರನ್ನು ಅನಾವರಣಗೊಳಿಸಿದರು.

ಈ ಸಂದರ್ಭದಲ್ಲಿ ಯುನೈಟೆಡ್ ಟೊಯೋಟಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆರೂರ್ ಗಣೇಶ್ ರಾವ್, ನಿರ್ದೇಶಕ ಡಾ. ರಾಘವೇಂದ್ರ ರಾವ್, ರಾಮ್ ಗೋಪಾಲ್ ರಾವ್, ಆರೂರು ವಿಕ್ರಮ್ ರಾವ್, ಸಿಇಒ ರಮೇಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ನೂತನ ಕಾರಿನ ಕೀಲಿಕೈಯನ್ನು ಜನಾರ್ದನ ಅರ್ಕುಳ ಸೇರಿದಂತೆ ನಾಲ್ಕು ಪ್ರಮುಖ ಗ್ರಾಹಕರಿಗೆ ಹಸ್ತಾಂತರಿದಲಾಯಿತು. ತರ್ಜನಿ ಕಮ್ಯುನಿಕೇಶನ್ಸ್  ಚೇರ್‍ಮನ್‌ ಸಂಜಯ ಪ್ರಭು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News