ದಕ್ಷಿಣ ಕೊರಿಯಾ: ವಾಯುಪಡೆಯ ಎರಡು ವಿಮಾನಗಳ ಡಿಕ್ಕಿ, ಮೂವರು ಮೃತ್ಯು

Update: 2022-04-01 06:48 GMT

ಸಿಯೋಲ್(ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಎರಡು ವಾಯುಪಡೆಯ ವಿಮಾನಗಳು ಶುಕ್ರವಾರ ತರಬೇತಿಯಲ್ಲಿ ನಿರತವಾಗಿದ್ದಾಗ ಪರಸ್ಪರ  ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದಾರೆ ಹಾಗೂ  ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಆಸನ ಸಾಮರ್ಥ್ಯದ  ಕೆಟಿ-1 ತರಬೇತುದಾರ ವಿಮಾನಗಳು ಡಿಕ್ಕಿ ಹೊಡೆದ ನಂತರ ಆಗ್ನೇಯ ನಗರವಾದ ಸಚೆನ್‌ನಲ್ಲಿ ಪರ್ವತಕ್ಕೆ ಅಪ್ಪಳಿಸಿದವು ಎಂದು ತುರ್ತು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಮೂವರು  ಸಾವನ್ನಪ್ಪಿದ್ದಾರೆ ಹಾಗೂ  ಒಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ಹೆಲಿಕಾಪ್ಟರ್‌ಗಳು, 20 ವಾಹನಗಳು ಹಾಗೂ  ಹತ್ತಾರು ತುರ್ತು ಕಾರ್ಯಕರ್ತರನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News