ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವವರ ವಿರುದ್ಧ ಕಮಲ್ ಪಂತ್‍ಗೆ ವಕೀಲರ ನಿಯೋಗದಿಂದ ದೂರು
Update: 2022-04-01 18:27 IST
ಬೆಂಗಳೂರು: ಹಲಾಲ್ ಕುರಿತಂತೆ ಸುಳ್ಳು ಸುದ್ದಿ ಹಬ್ಬಿಸಿ ಸಮುದಾಯಗಳ ಮಧ್ಯೆ ಶಾಂತಿ ಸುವ್ಯವಸ್ಥೆ ಹಾಳು ಮಾಡುತ್ತಿರುವವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ವಕೀಲ ಎ.ಪಿ.ರಂಗನಾಥ್ ನೇತೃತ್ವದ ವಕೀಲರ ನಿಯೋಗ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ಸಮುದಾಯಗಳ ಮಧ್ಯೆ ಕೋಮುವಾದದ ಬೀಜ ಬಿತ್ತುತ್ತಿರುವ ಪ್ರಶಾಂತ್ ಸಂಬರಗಿ, ಪುನೀತ್ ಕೆರೆಹಳ್ಳಿ, ಕಾಳಿಸ್ವಾಮಿ ಸೇರಿ ಹಲವರ ವಿರುದ್ಧ ಕ್ರಮ ಜರುಗಿಸಿ ಎಂದು ಪೊಲೀಸ್ ಕಮಿಷನರ್ ಗೆ ದೂರು ಸಲ್ಲಿಸಿದೆ.
ಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಒಂದು ಟ್ವೀಟ್ ಮಾಡಿದ್ದಕ್ಕೆ ನಟ ಚೇತನ್ ಅವರನ್ನು ಬಂಧನ ಮಾಡಿರುವ ಪೊಲೀಸರು ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ ಎಂದು ವಕೀಲರ ನಿಯೋಗದ ನೇತೃತ್ವ ವಹಿಸಿದ ಎ.ಪಿ. ರಂಗನಾಥ್ ದೂರಿದರು. ಜೊತೆಗೆ ಹಿರಿಯ ವಕೀಲ ಬಾಲನ್, ವಕೀಲರಾದ ಜಗದೀಶ್, ಸೂರ್ಯ ಮುಕುಂದ್‍ರಾಜ್ ನಿಯೋಗದಲ್ಲಿ ಇದ್ದರು.