ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನ: ಅವಧಿ ವಿಸ್ತರಣೆ
Update: 2022-04-01 22:01 IST
ಮಂಗಳೂರು : ಪ್ರಸಕ್ತ (2021-22) ಸಾಲಿನಲ್ಲಿ ಮೆಟ್ರಿಕ್ ನಂತರ ಹಾಗೂ ಮೆರಿಟ್-ಕಂ-ಮೀನ್ಸ್ ವಿದ್ಯಾರ್ಥಿ ವೇತನಕ್ಕೆ NSP ಮೂಲಕ ಅರ್ಜಿ ಸಲ್ಲಿಸಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು SSP ಮೂಲಕ ಸಲ್ಲಿಸುವ ಅರ್ಜಿಯ ಅವಧಿಯನ್ನು ಎಪ್ರಿಲ್ ೩೦ರವರೆಗೆ ವಿಸ್ತರಿಸಲಾಗಿದೆ.
NSP ಮೂಲಕ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ SSPದಲ್ಲೂ ಆನ್‌ಲೈನ್ (ssp.postmatric.karnataka.gov.in) ಮೂಲಕ ಅರ್ಜಿ ಸಲ್ಲಿಸಬೇಕಾಗಿದೆ.
SSP ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸುವ ಸಂದರ್ಭ NSPಯಲ್ಲಿ ಪಡೆದ ಐಡಿ ನಂ. ಕಡ್ಡಾಯವಾಗಿರುತ್ತದೆ. NSP ಮೂಲಕ ಅರ್ಜಿ ಸಲ್ಲಿಸಿಯೂ ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶ (SSP)ಯಲ್ಲಿ ಅರ್ಜಿ ಸಲ್ಲಿಸದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮಂಜೂರುಗೊಳ್ಳುವುದಿಲ್ಲ ಎಂದು ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.