×
Ad

ಐಡಿಎ ವತಿಯಿಂದ ದಂತ ವೈದ್ಯಕೀಯ ಕಾರ್ಯಾಗಾರ

Update: 2022-04-01 22:03 IST

ಮಂಗಳೂರು : ಇಂಡಿಯನ್ ಡೆಂಟಲ್ ಅಸೋಸಿಯೇಶನ್ (ಐಡಿಎ) ದ.ಕ.ಘಟಕದ ವತಿಯಿಂದ ʼರೂಟ್ ಕೆನಾಲ್ ಚಿಕಿತ್ಸೆಯ ಯಶಸ್ಸು ಎಂಬ ವಿಷಯದ  ಕುರಿತು ದಂತ ವೈದ್ಯಕೀಯ ಕಾರ್ಯಾಗಾರವು ನಗರದ ಖಾಸಗಿ ಹೊಟೇಲ್‌ನಲ್ಲಿ ಇತ್ತೀಚೆಗೆ ನಡೆಯಿತು.

ಐಡಿಎ ದ.ಕ.ಘಟಕದ ಅಧ್ಯಕ್ಷ ಡಾ. ಪದ್ಮರಾಜ್ ಹೆಗ್ಡೆ ಕಾರ್ಯಾಗಾರ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಡಾ. ಕಾರ್ತಿಕ್  ಶೆಟ್ಟಿ,  ಭಾಗವಹಿಸಿದ್ದರು.

ಐಡಿಎ ದ.ಕ.ಜಿಲ್ಲಾ  ಘಟಕದ ಕಾರ್ಯದರ್ಶಿ ಡಾ.ಭರತ್ ಪ್ರಭು, ಕೋಶಾಧಿಕಾರಿ ಪ್ರಸನ್ನ ಕುಮಾರ್ ರಾವ್ ಉಪಸ್ಥಿತರಿದ್ದರು. ಡಾ. ರಚನಾ ಶೆನೊಯ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News