×
Ad

ಆರೋಗ್ಯ ಕ್ಷೇತ್ರದ ಮೂಲಕ ರಾಷ್ಟ್ರದ ಅಭ್ಯುದಯಕ್ಕೆ ಕೊಡುಗೆ ನೀಡಲು ಯುವ ಪದವೀಧರರಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ

Update: 2022-04-01 22:16 IST

ಮಂಗಳೂರು : ಆರೋಗ್ಯ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವಯ ಮೂಲಕ ರಾಷ್ಟ್ರದ ಅಭ್ಯುದಯಕ್ಕೆ ಕೊಡುಗೆ ನೀಡಲು ಯುವ ಪದವೀಧರರಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದ್ದಾರೆ.

ನಗರದ  ಮಂಗಳಾ  ಶಿಕ್ಷಣ ಸಮೂಹ ಸಂಸ್ಥೆ ಗಳ ಪದವಿ ಪ್ರದಾನ ಸಮಾರಂಭ ವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಭಾರತದ ಪ್ರಾಚೀನ ಪಂಡಿತರಾದ ಚರಕ, ಸುಶ್ರುತರು ತಮ್ಮ ವೈದ್ಯಕೀಯ ಜ್ಞಾನದ ಮೂಲಕ ವಿಶ್ವ ಮಾನ್ಯತೆ ಪಡೆದಿದ್ದರು. ಇಂದು ವೈದ್ಯಕೀಯ ಕ್ಷೇತ್ರ ತಂತ್ರಜ್ಞಾನದ ಮೂಲಕ ವಿಸ್ತಾರವಾಗಿ ಬೆಳೆದಿದೆ. ಈ ಹಂತದಲ್ಲಿ ದೇಶದ ಮೂಲ ತಳಹದಿಯ ನ್ನು ಮರೆಯಬಾರದು. ವೃತ್ತಿಯೊಂದಿಗೆ ಸೇವೆಗೆ ಒತ್ತು ನೀಡುವ ತಾವು ಓದಿದ ಸಂಸ್ಥೆ, ದೇಶಕ್ಕೆ ಕೊಡುಗೆ ನಿಡುವಂತಾಗಬೇಕು.  ಸದುದ್ದೇಶದಿಂದ ಮಾಡುತ್ತಿರುವ ಶೈಕ್ಷಣಿಕ ಸೇವೆ  ರಾಷ್ಟಕ್ಕೆ ಸಲ್ಲಿಸುತ್ತಿರುವ ಸೇವೆ ಎಂದವರು ತಿಳಿಸಿದ್ದಾರೆ.

ಮಂಗಳಾ ಸಮೂಹ ಶೈಕ್ಷಣಿಕ ಸಂಸ್ಥೆಯ ಸುಮಾರು 450  ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಪದವಿ ಪ್ರದಾನ ಮಾಡಿದರು. ಸಮಾ ರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಲಾಮತುಪ್ತೇನ್ ಪುನ್ಟ್ ಸೋಕ್, ಐಎಪಿ ಅಧ್ಯಕ್ಷ ಯು.ಟಿ. ಇಫ್ತಿಕಾರ್ ಅಲಿ ಭಾಗವಹಿಸಿದ್ದರು.

ಮಂಗಳಾ ಸಮೂಹ ಶೈಕ್ಷಣಿಕ ಸಂಸ್ಥೆ ಗಳ ಅಧ್ಯಕ್ಷ ಡಾ.ಗಣಪತಿ ಪಿ ಅಧ್ಯಕ್ಷ ತೆ ವಹಿಸಿದ್ದರು. ಡಾ.ಅನಿತಾ ಜಿ.ಭಟ್, ಶಂಕರ್ ಭಟ್, ರಾಜೇಶ್ ಮಳಿ ಡಾ.ಮರಿಯಾ ಪಿಂಟೋ, ಪ್ರೂ.ಪ್ರತಿಜ್ಞಾ ಸುಹಾಸಿನಿ, ಡಾ.ಭಾರತಿ ಕೆ.ಎಚ್ ಉಪಸ್ಥಿತರಿದ್ದರು. ಶೈಕ್ಷಣಿಕ ಸಲಹೆಗಾರರಾದ ಡಾ. ನೌಫ್ಸಸೀರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News