×
Ad

ಲೆಕ್ಸ್ ಜೂರಿಸ್ ಲಾ ಚೇಂಬರ್ ವತಿಯಿಂದ ಕಾನೂನು ಪರೀಕ್ಷೆಯಲ್ಲಿ ಉತ್ತಮ ಸಾಧನಗೈದ ವಿದ್ಯಾರ್ಥಿಗಳಿಗೆ ಸನ್ಮಾನ

Update: 2022-04-02 12:33 IST

ಮಂಗಳೂರು: ಲೆಕ್ಸ್ ಜೂರಿಸ್ ಲಾ ಚೇಂಬರ್ ವತಿಯಿಂದ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯ ನಡೆಸಿದ 2021ನೇ ಸಾಲಿನ ಕಾನೂನು ಪರೀಕ್ಷೆಯಲ್ಲಿ ಉತ್ತಮ ಸಾಧನಗೈದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಮಂಗಳೂರಿನ ಲೆಕ್ಸ್ ಜೂರಿಸ್ ಕಚೇರಿಯಲ್ಲಿ ನಡೆಯಿತು.

ಕಾನೂನು ಪರೀಕ್ಷೇಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಸುಹಾನಾ ಸಫರ್, ದೀಷಾ, ಕಾವ್ಯ, ನಮೀತಾ, ಐಶ್ವರ್ಯ, ರಕ್ಷೀತಾ ಎಸ್ ರವರನ್ನು ಸನ್ಮಾನಿಸಲಾಯಿತು.

ಹಿರಿಯ ವಕೀಲ ಯು.ಮಹಮ್ಮದ್ ಅಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿ ಇತ್ತೀಚೆನ ದಿನಗಳಲ್ಲಿ ಸಾಧನೆ ಮಾಡಲು ಬಹಳಷ್ಟು ಅವಕಾಶಗಳಿವೆ. ವಿದ್ಯಾರ್ಥಿಗಳು ಅವಕಾಶಗಳನ್ನು ಸಮಾರ್ಪಕವಾಗಿ ಸದುಪಯೋಗಿಸಿಕೊಂಡು ಇನ್ನಷ್ಟು ಸಾಧನೆ ಮಾಡಲು ಸಾಧ್ಯ. ಶಿಕ್ಷಣದ ಬಳಿಕ ಉದೋಗ್ಯದಲ್ಲಿ ಪ್ರಮಾಣಿಕತೆಯಿಂದ ದುಡಿದಾಗ ಯಶಸ್ಸು ಸಾಧ್ಯ ಎಂದು ಹೇಳಿದರು.

ನಿವೃತ್ತ ಪೊಲೀಸ್ ಅಧಿಕಾರಿ ಬಶೀರ್ ಅಹ್ಮದ್, ಪೊಲೀಸ್ ಸಬ್ ಇನ್‌ ಸ್ಪೆಕ್ಟರ್ ಇಮಾಮ್, ವಕೀಲರಾದ ಉಮರ್ ಫಾರೂಕ್, ಆಸಿಫ್ ಬೈಕಾಡಿ, ಅಬು ಆರಿಸ್, ಮುಕ್ತಾರ್ ಅಹ್ಮದ್, ಶೇಕ್ ಇಸಾಕ್, ಕೆ. ಮುಫೀದಾ ರಹ್ಮಾನ್,‌ ಆಶಿಕಾ ಹುಸೈನ್, ಅಲಿಷಾ ಝುಲ್ಕ, ಸಮಾಜ ಸೇವಕ ಇಲ್ಯಾಸ್ ಮಂಗಳೂರು ಉಪಸ್ಥಿತರಿದರು.

ಯುವ ನ್ಯಾಯವಾದಿ ಮಹಮ್ಮದ್ ಅಸ್ಗರ್ ಮುಡಿಪು ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಉಮರ್ ಫಾರೂಕ್ ಕಾವೂರ್ ಸ್ವಾಗತಿಸಿದರು. ನ್ಯಾಯವಾದಿ ಇಜಾಝ್ ಆಹ್ಮದ್ ಉಳ್ಳಾಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News