×
Ad

ಮಂಗಳೂರು : ಫೋರಂ ಫಿಝಾ ಮಾಲ್‌ ನಲ್ಲಿ ಫುಡ್‌ ಸ್ಟ್ರೀಟ್ ಆರಂಭ

Update: 2022-04-03 21:26 IST

ಮಂಗಳೂರಿನ ಪ್ರತಿಷ್ಠಿತ ಫೋರಂ ಫಿಝಾ ಮಾಲ್ ನಲ್ಲಿ ಎರಡು ವರ್ಷಗಳ ಬಳಿಕ ಫುಡ್ ಸ್ಟ್ರೀಟ್ ಆರಂಭವಾಗಿದೆ.

ರಮಝಾನ್‌ ಆರಂಭದಲ್ಲಿ ಈ ರಸದೂಟದ ಅನುಭವ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ.

ಈ ಫುಡ್ ಸ್ಟ್ರೀಟ್ ಹಲವು ವರ್ಷಗಳಿಂದ ಹೆಸರುವಾಸಿಯಾಗಿದೆ. ಮಂಗಳೂರು ನಗರದ ಪ್ರಸಿದ್ಧ ಹೋಟೆಲ್ ಗಳು ಈ ಹಬ್ಬದೂಟದಲ್ಲಿ ಗ್ರಾಹಕರಿಗೆ ವಿಶೇಷ ರೀತಿಯ ರುಚಿಕರ ಹಾಗೂ ಶುದ್ಧ ಆಹಾರ ನೀಡಲಿವೆ.

ಬಿರಿಯಾನಿ, ಟಿಕ್ಕ, ತಂದೂರಿ ,ಐಸ್ ಕ್ರೀಂ, ಸಿಹಿ ತಿಂಡಿಗಳು.... ಹೀಗೆ ಬಗೆಬಗೆಯ ರುಚಿಗಳು ಒಂದೇ ಸೂರಿನಡಿ ಲಭ್ಯವಾಗಲಿವೆ.

ಹಬ್ಬದ ಅಲಂಕಾರದ ಜೊತೆಗೆ ಫೋಟೊ  ತೆಗೆಯುವಂತಹ ವಾತಾವರಣ  ಈ ಬಾರಿಯ ವಿಶೇಷ.

ತಿನ್ನುತ್ತಾ, ಶಾಪಿಂಗ್ ಮಾಡುತ್ತಾ, ಆಟವಾಡುತ್ತಾ ಆನಂದಿಸಿ ಎನ್ನುವುದು ಈ ಬಾರಿಯ ಘೋಷವಾಕ್ಯ.

5000 ರೂ. ಖರೀದಿಗೆ 500 ರೂ. ಮೊತ್ತದ ಪಿವಿಆರ್ ಸಿನಿಮಾ ಟಿಕೆಟ್ ಗಳು , 10000 ರೂ. ಮೊತ್ತದ ಖರೀದಿಗೆ ಅಡಿಗೆ ಮಾಡುವ ಸಾಮಗ್ರಿಗಳು, ಹಾಗೆಯೇ 30,000 ರೂ.ಗಿಂತ ಹೆಚ್ಚಿನ ಖರೀದಿಗೆ ಎಲೆಕ್ಟ್ರಾನಿಕ್ ಉಪಕರಣಗಳ ಕೊಡುಗೆ ಮತ್ತು ವಾರದಲ್ಲಿ ಎರಡು ಅತ್ಯಧಿಕ ಖರೀದಿದಾರರಿಗೆ ಕುಟುಂಬ ಸಮೇತವಾಗಿ ಮೆರಿಡಿಯನ್ ರೆಸಾರ್ಟ್ ನ ಪ್ರವಾಸ ನೀಡಲಾಗುವುದು.

ಈ ಕೊಡುಗೆ ಎ. 2ರಿಂದ ಆರಂಭವಾಗಿದ್ದು, ಮೇ 2 ರ ವರೆಗೆ ಇರಲಿದೆ.

ಅಂತರ್ ರಾಷ್ಟ್ರೀಯ ಮಟ್ಟದ ಫೋರಂ ಮಾಲ್ ನಲ್ಲಿ ಜಗತ್ಪ್ರಸಿದ್ಧ ಬ್ರಾಂಡ್‌ಗಳ ಜೊತೆಗೆ ವಿಶಾಲವಾದ ಪಾರ್ಕಿಂಗ್ ಹಾಗೂ ಹಲವು ಗ್ರಾಹಕಸ್ನೇಹಿ ಸೌಕರ್ಯಗಳಿವೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News