×
Ad

ಮೂಲಭೂತ ಸೌಕರ್ಯ ಕಡಿತಗೊಳಿಸದಂತೆ ಸೆಂಟ್ರಲ್ ಕಮಿಟಿ ಮನವಿ

Update: 2022-04-04 22:47 IST

ಮಂಗಳೂರು : ರಮಝಾನ್ ಉಪವಾಸ ಆರಂಭಗೊಂಡಿದ್ದು, ಈ ವೇಳೆ ಮೂಲಭೂತ ಸೌಲಭ್ಯಗಳಾದ ನೀರು, ವಿದ್ಯುತ್ ಕಡಿತ ಮಾಡಬಾರದು ಮತ್ತು ರಾತ್ರಿ ಸುಮಾರು ೮ ರಿಂದ ೧೦ರವರೆಗೆ ತರಾವೀಹ್ ವಿಶೇಷ ಪ್ರಾರ್ಥನೆ ಇರುವುದರಿಂದ ಸೂಕ್ಷ್ಮಪ್ರದೇಶಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸುವಂತೆ ದ.ಕ.ಜಿಲ್ಲಾಧಿಕಾರಿ, ಮಂಗಳೂರು ನಗರ ಪೊಲೀಸ್ ಆಯುಕ್ತ, ದ.ಕ.ಜಿಲ್ಲಾ ಎಸ್ಪಿಗೆ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ನಿಯೋಗ ಮನವಿ ಸಲ್ಲಿಸಿದೆ.

ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್‌ರ ನಿರ್ದೇಶನದಂತೆ ಉಪಾಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಸೈಯದ್ ಅಹ್ಮದ್ ಬಾಷಾ ತಂಳ್, ಕಾರ್ಯದರ್ಶಿ ಡಾ. ಮುಹಮ್ಮದ್ ಆರೀಫ್ ಮಸೂದ್ ನಿಯೋಗದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News