ಧ್ವನಿವರ್ಧಕ ಬಳಕೆ ವಿಚಾರ; ಕೋರ್ಟ್ ಆದೇಶವನ್ನ ಯಥಾವತ್ತಾಗಿ ಪಾಲಿಸಿ: ಡಿಜಿಪಿ ಪ್ರವೀಣ್ ಸೂದ್
Update: 2022-04-06 12:21 IST
ಬೆಂಗಳೂರು : ರಾಜ್ಯದಲ್ಲಿ ಮಸೀದಿ ಹಾಗೂ ಇತರ ಧಾರ್ಮಿಕ ಕೇಂದ್ರಗಳಲ್ಲಿ ಮೈಕ್ ಬಳಕೆ ವಿಚಾರವಾಗಿ ಡಿಜಿಪಿ ಪ್ರವೀಣ್ ಸೂದ್ ಸುತ್ತೋಲೆ ಹೊರಡಿಸಿದ್ದಾರೆ.
ರಾಜ್ಯದ ಎಲ್ಲಾ ಕಮಿಷನರ್, ಐಜಿಪಿ ಹಾಗೂ ಎಸ್ಪಿಗಳಿಗೆ ಸುತ್ತೋಲೆ ಕಳಿಸಿರುವ ಪ್ರವೀಣ್ ಸೂದ್, ಹೈ ಕೋರ್ಟ್ ಆದೇಶವನ್ನ ಯಥಾವತ್ತಾಗಿ ಪಾಲಿಸಿ. ಶಬ್ದಮಾಲಿನ್ಯ ಉಂಟು ಮಾಡುತ್ತಿರುವವರ ಮೇಲೆ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಧಾರ್ಮಿಕ ಕೇಂದ್ರಗಳು, ಪಬ್, ನೈಟ್ ಕ್ಲಬ್, ಕಾರ್ಯಕ್ರಮಗಳ ಮೇಲೆ ನಿಗಾ ವಹಿಸಿ, ಶಬ್ಧ ಮಾಲಿನ್ಯ ಉಂಟು ಮಾಡುತ್ತಿದ್ದರೆ, ಮಾಲಿನ್ಯ ನಿಯಂತ್ರಣ ಮಂಡಳಿ ಕಾಯ್ದೆ 2000ದಡಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.