×
Ad

ಭಂಡಸಾಲೆ ರತ್ನ ಪ್ರಶಸ್ತಿ - 20022 ಪ್ರದಾನ

Update: 2022-04-06 17:40 IST

ಉಳ್ಳಾಲ :  ಹರೇಕಳ ಗ್ರಾಮದ ಸಂಪಿಗೆದಡಿ ಆಂಬ್ಲಮೊಗರು ಶ್ರೀ ಅರ್ಧನಾರೀಶ್ವರ ದೇವಸ್ಥಾನದ ಪ್ರತಿಷ್ಠೆ ಅಷ್ಟಬಂಧ ಲೇಪನ, ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮದಲ್ಲಿ ತೆಂಕುತಿಟ್ಟು ಯಕ್ಷಗಾನ ರಂಗದ ಹಿರಿಯ ವೇಷ ಧಾರಿ ನಗ್ರಿ ಮಹಾಬಲ ರೈ, ಪುಂಡು ವೇಷಧಾರಿ ಮಾಡಾವು ಕೊರಗಪ್ಪರೈ ಮತ್ತು ಪ್ರಸಿದ್ಧ ವೇಷಧಾರಿ, ಅರ್ಥ ದಾರಿ ಕನ್ನಡಿಕಟ್ಟೆ ಗಣೇಶ್ ಶೆಟ್ಟಿ ಅವರಿಗೆ ಪ್ರಥಮ ವರ್ಷದ ಭಂಡಸಾಲೆ ರತ್ನ ಪ್ರಶಸ್ತಿ-೨೦೨೨  ನೀಡಿ ಗೌರವಿಸಲಾಯಿತು.

ಕೇಸರಿ ಎಸ್. ಶೆಟ್ಟಿ ದೋಣಿಂಜೆ ಗುತ್ತು ಮತ್ತು ಬಿ. ಸಂಕಪ್ಪ ಶೆಟ್ಟಿ ಭಂಡಾರಪಾದೆ ಹಾಗೂ ಮಕ್ಕಳಿಂದ ಕಟೀಲು ಮೇಳದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಸೇವೆಯ ಸಂದರ್ಭದಲ್ಲಿ ನೀಡಲಾಗುವ ’ಭಂಡಸಾಲೆ ರತ್ನ ಪ್ರಶಸ್ತಿ-೨೦೨೨ನ್ನು ಶ್ರೀ ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಹಾಗೂ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ  ಪ್ರದಾನ ಮಾಡಿದರು.

ಬ್ರಹ್ಮ ಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕೆ.ಮೋಹನ್‌ದಾಸ್ ರೈ ದೆಬ್ಬೇಲಿಗುತ್ತು ಹಾಗೂ ಪ್ರಧಾನ ಕಾರ್ಯದರ್ಶಿ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂಘಟಕರಾದ ಭಂಡಾರಪಾದೆ ಮಹೇಶ್ ಶೆಟ್ಟಿ, ಭಂಡಾರಪಾದೆ ಮಧುಸೂದನ್ ಶೆಟ್ಟಿ, ಪ್ರದೀಪ್ ಆಳ್ವ ಉಪಸ್ಥಿತರಿದ್ದರು. ಮಾರ್ಗದರ್ಶಕ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಭಾಗ್ಯರಾಜ್ ಶೆಟ್ಟಿ ಹರೇಕಳ ಪ್ರಶಸ್ತಿ ಪತ್ರ ವಾಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News