ಗುರುಪುರ : 30 ಅಡಿ ಆಳಕ್ಕೆ ಉರುಳಿದ ಲಾರಿ
Update: 2022-04-06 20:44 IST
ಮಂಗಳೂರು : ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಗುರುಪುರ ಅಣೆಬಳಿಯಲ್ಲಿ ಮಂಗಳವಾರ ರಾತ್ರಿ ಮಂಗಳೂರಿಗೆ ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸುಮಾರು 30 ಅಡಿ ಆಳದ ಕಮರಿಗೆ ಉರುಳಿದ ಘಟನೆ ನಡೆದಿದೆ.
ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ವಾಹನವೊಂದಕ್ಕೆ ಸೈಡ್ ಕೊಡುವಾಗ ಚಾಲಕನ ನಿಯಂತ್ರಣ ತಪ್ಪಿದ ಖಾಲಿ ಲಾರಿ ರಸ್ತೆ ಬದಿಯಿಂದ ಕೆಳಗುರುಳಿ ಮರಕ್ಕೆ ಸಿಕ್ಕಿಕೊಂಡಿತು. ಚಾಲಕ ಅಪಾಯದಿಂದ ಪಾರಾಗಿ ಮೇಲೇರಿದ್ದಾರೆ. ಬಳಿಕ ಲಾರಿ ಮತ್ತೆ ಆಳಕ್ಕೆ ಉರುಳಿದ್ದು, ಭಾಗಶಃ ನುಜ್ಜುಗುಜ್ಜಾಗಿದೆ.