ಪಣಂಬೂರು: ಗಾಂಜಾ ಸೇವನೆ ಆರೋಪ; ಓರ್ವ ಸೆರೆ
Update: 2022-04-06 22:43 IST
ಮಂಗಳೂರು, ಎ.6: ಗಾಂಜಾ ಸೇವಿಸಿದ್ದ ಆರೋಪದಲ್ಲಿ ಓರ್ವನನ್ನು ಪಣಂಬೂರು ಠಾಣಾ ಪೊಲೀಸರು ಬುಧವಾರ ಬಂಧಿಸಿರುವ ಘಟನೆ ವರದಿಯಾಗಿದೆ.
ಬಂಧಿತನನ್ನು ಡೌನ್ ತೊಕೂರು ನಿವಾಸಿ ಅಬ್ದುಲ್ ರಾಝಿಕ್ ( 30) ಎಂದು ತಿಳಿದು ಬಂದಿದೆ.
ಪಣಂಬೂರು ಪೊಲೀಸರು ಬುಧವಾರ ಮಧ್ಯಾಹ್ನ ಗಸ್ತು ನಡೆಸುತ್ತಿದ್ದ ವೇಳೆ ಡೌನ್ ತೋಕೂರು ಬಳಿ ಮಾದಕ ವಸ್ತು ಸೇವಿಸಿ ನಶೆಯಲ್ಲಿದ್ದ ಆರೋಪಿ ರಾಝೀಕ್ ನನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಯನ್ನು ಆಸ್ಪತ್ರೆಗೆ ತಪಾಸಣೆಗೆ ಒಳಪಡಿಸಿದ್ದು. ಆತನ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ