ಮಂಗಳೂರು: ಕರ್ಕಶ ಹಾರ್ನ್ ತೆರವು ಕಾರ್ಯಾಚರಣೆ; 154 ಪ್ರಕರಣ ದಾಖಲು, ದಂಡ
Update: 2022-04-07 21:38 IST
ಮಂಗಳೂರು : ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಗುರುವಾರ ಸಂಚಾರ ಪೊಲೀಸರು ಕರ್ಕಶ ಹಾರ್ನ್ ತೆರವಿಗಾಗಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.
ಅಲ್ಲದೆ 154 ಪ್ರಕರಣಗಳನ್ನು ದಾಖಲಿಸಿ ಹಾರ್ನ್‌ಗಳನ್ನು ತೆರವುಗೊಳಿಸಿದ್ದಾರೆ. 77 ಸಾವಿರ ರೂ. ದಂಡ ವಿಧಿಸಿದ್ದಾರೆ.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್‌ರ ಸೂಚನೆಯ ಮೇರೆಗೆ ಸಂಚಾರ ಉತ್ತರ, ಸಂಚಾರ ದಕ್ಷಿಣ, ಸಂಚಾರ ಪೂರ್ವ ಠಾಣೆಗಳ ವ್ಯಾಪ್ತಿಗಳಲ್ಲಿ ಕರ್ಕಶ ಹಾರ್ನ್ ತೆರವು ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
ಈ ಕಾರ್ಯಾಚರಣೆಯು ನಿರಂತರ ಮುಂದುವರಿಯಲಿದೆ ಎಂದು ಸಂಚಾರ ಉಪವಿಭಾಗದ ಎಸಿಪಿ ನಟರಾಜ್ ತಿಳಿಸಿದ್ದಾರೆ.