×
Ad

ಮಂಗಳೂರಿನ ʼಪೋಲಾರ್ ಬೇರ್ʼ ಐಸ್‌ಕ್ರೀಮ್ ಪ್ರಿಯರಿಗೆ ನೆಚ್ಚಿನ ಪಾರ್ಲರ್

Update: 2022-04-07 22:13 IST

ಮಂಗಳೂರು : ನಗರವು ಕೇವಲ ಕೋರಿ ರೊಟ್ಟಿ, ಬಂಗುಡೆ ಫ್ರೈ, ನೀರ್‌ದೋಸೆಗೆ ಮಾತ್ರ ಹೆಸರುವಾಸಿಯಲ್ಲ, ಐಸ್‌ಕ್ರೀಂ ಪ್ರಿಯರಿಗೂ ನೆಚ್ಚಿನ ತಾಣವಾಗಿ ಮಂಗಳೂರು ಮಾರ್ಪಟ್ಟಿವೆ.

ಅಂದರೆ ನಗರದ  ಮಣ್ಣಗುಡ್ಡೆಯಲ್ಲಿ ಪೋಲಾರ್ ಬೇರ್ ಐಸ್‌ಕ್ರೀಂ ಪ್ರಿಯರಿಗೆ ತಂಪು ತಂಪಿನ ಕೇಂದ್ರವಾಗಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಬೆಂಗಳೂರು ಮೂಲದ ಈ ಪೋಲಾರ್ ಬೇರ್ ವಾರಾಂತ್ಯದ ರವಿವಾರ ಕುಟುಂಬ ಸಮೇತ ಐಸ್‌ಕ್ರೀಂ ಸವಿಯಲು ಹೇಳಿ ಮಾಡಿಸಿದಂತಿದೆ.

ಪೋಲಾರ್ ಬೇರ್‌ನಲ್ಲಿ ಆಯ್ಕೆಗಳಿಗೆ ಕೊರತೆಯಿಲ್ಲ. ನುರಿತ ತಂಡದಿಂದ ತಯಾರಿಸಲ್ಪಟ್ಟ ಬಗೆ ಬಗೆಯ ಐಸ್‌ಕ್ರೀಂ ನಾಲಗೆಗೆ ರುಚಿ ನೀಡುತ್ತದೆ. ಅಷ್ಟೇ ಅಲ್ಲ, ಮನವನ್ನೂ ತಣಿಸುತ್ತದೆ. ಗಡಿಬಿಡಿಯ ಜೀವನದಿಂದ ಕೆಲಕಾಲ ಬಿಡುವು ಕೊಟ್ಟು ಪೋಲಾರ್ ಬೇರ್‌ನೊಳಗೆ ಹೊಕ್ಕರೆ ಗಡ್‌ಬಡ್‌ನಿಂದ ಹಿಡಿದು ಚಾಕಲೇಟ್ ಐಸ್‌ಕ್ರೀಂ ಅಂದರೆ ಡೆತ್ ಬೈ ಚಾಕಲೇಟ್‌ವರೆಗಿನ ಎಲ್ಲಾ ಫ್ಲೇವರುಗಳೂ ಸಿಗುತ್ತವೆ.

ಫ್ರೂಟ್ ಜೆಸ್ಟ್, ಚಾಕೊಜಿಲ್ಲಾ, ಡ್ರೈಫ್ರೂಟ್ ಸ್ಪೆಷಲ್, ಮ್ಯಾಂಗೊ ಬೆರ್ರಿ, ಲಿಚಿ ಸಂಡೆಯಲ್ಲದೆ ತೊಂಬತ್ತು ಬಗೆಯ ಐಸ್‌ಕ್ರೀಂಗಳನ್ನು ಪೋಲಾರ್ ಬೇರ್‌ನಲ್ಲಿ ಲಭ್ಯವಿದೆ.

ಎಳೆಯ ಮಕ್ಕಳಿಂದ ಹಿಡಿದು ಅಜ್ಜ-ಅಜ್ಜಿ ಸಹಿತ ಎಲ್ಲಾ ವಯಸ್ಸಿನವರಿಗೂ ಪೋಲಾರ್ ಬೇರ್‌ನಲ್ಲಿ ಸ್ವಾಧಿಷ್ಟ ಐಸ್‌ಕ್ರೀಂ ಸಿಗಲಿದೆ. ಐಸ್‌ಕ್ರೀಮ್ ಮಾತ್ರವಲ್ಲ, ಮಿಲ್ಕ್ ಶೇಕ್, ಕೇಕ್, ಸ್ಯಾಂಡ್‌ವಿಚ್ ಕೂಡ ಸಿಗಲಿದೆ. ಕಾಲಕಾಲಕ್ಕೆ ಹೊಸ ಹೊಸ ತಿಂಡಿ ತಿನಿಸುಗಳು ಪೋಲಾರ್ ಬೇರ್ ಮೆನು ಕಾರ್ಡಿಗೆ ಸೇರ್ಪಡೆಯಾಗುತ್ತಲೇ ಇರುತ್ತವೆ.

ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ. ಇದು ಪೋಲಾರ್ ಬೇರ್‌ನ ಹಿರಿಮೆಯಾಗಿದೆ. ಹಾಗಾಗಿ ದೇಶಾದ್ಯಂತ ಅತೀ ವೇಗದಲ್ಲಿ ಐಸ್‌ಕ್ರೀಂ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿರುವ ಪೋಲಾರ್ ಬೇರ್ ದಕ್ಷಿಣ ಭಾರತದಲ್ಲಿ 100 ಪಾರ್ಲರುಗಳನ್ನು ಹೊಂದಿದೆ.

ಸದಾ ಹೊಸದರತ್ತ ಗಮನ ಹರಿಸುವ ಪೋಲಾರ್ ಬೇರ್ ಗ್ರಾಹಕರಿಗೆ ಹಿತದೃಷ್ಟಿಯಿಂದ ಹಲವು ಬಗೆಯ ಪ್ರಿಪ್ಯಾಕ್ಡ್ ಸಂಡೆ ಟಬ್‌ಗಳನ್ನು ತನ್ನ ಮೆನುವಿಗೆ ಸೇರಿಸಿದೆ. ಮನೆಯ ಸಮಾರಂಭಗಳಿಗೆ ಹಲವು ಬಗೆಯ ಐಸ್‌ಕ್ರೀಂ, ಕೇಕುಗಳೂ ಇಲ್ಲಿ ಸಿಗುತ್ತವೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News