ನಾಟೆಕಲ್: ಮನೆ ಅಂಗಳದಲ್ಲಿದ್ದ ಅಡಿಕೆ ಕಳವು

Update: 2022-04-07 16:52 GMT

ಕೊಣಾಜೆ‌: ಮನೆ ಅಂಗಳದಲ್ಲಿ ಒಣಗಿಸಿಟ್ಟ ಸಾವಿರಾರು ರೂ. ಬೆಲೆಯ ಅಡಿಕೆಯನ್ನು ಕಳವು ಮಾಡಿರುವ ಘಟನೆ ಕೊಣಾಜೆ ಗ್ರಾಮದ ನಾಟೆಕಲ್‌ ಸೈಟ್ ಎಂಬಲ್ಲಿ ನಡೆದಿದೆ.

ನಾಟೆಕಲ್ ಸೈಟ್ ನಿವಾಸಿ ಮಹಮ್ಮದ್ ಎ.ಎಸ್ ಎಂಬವರ ಮನೆಯಿಂದ 60 ಕೆಜಿ ಅಡಿಕೆ ಕಳವು ಮಾಡಿದ್ದಾರೆ. ಅಡಿಕೆಯ ಒಟ್ಟು ಮೌಲ್ಯ ರೂ.28,000 ಎಂದು ಅಂದಾಜಿಸಲಾಗಿದೆ. ಕೊಣಾಜೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News