ಬುಚಾ ಹತ್ಯೆ ಕುರಿತ ಅಸಭ್ಯ ಟ್ವೀಟ್: ರಶ್ಯ ರಾಯಭಾರಿಗೆ ಫ್ರಾನ್ಸ್ ಸಮನ್ಸ್

Update: 2022-04-07 18:32 GMT

ಪ್ಯಾರಿಸ್, ಎ.7: ಉಕ್ರೇನ್‌ನ ಬುಚಾದಲ್ಲಿ ನಡೆದ ನಾಗರಿಕರ ಅಮಾನವೀಯ ಹತ್ಯೆ ಪ್ರಕರಣದ ಕುರಿತು ಅಸಭ್ಯ ಮತ್ತು ಪ್ರಚೋದನಕಾರಿಯಾಗಿ ಟ್ವೀಟ್ ಮಾಡಿದ ಹಿನ್ನೆಲೆಯಲ್ಲಿ ಫ್ರಾನ್ಸ್ ಸರಕಾರ ಗುರುವಾರ ರಶ್ಯಾದ ರಾಯಭಾರಿಗೆ ಸಮನ್ಸ್ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.

ಬುಚಾ ನಗರದ ರಸ್ತೆಯಲ್ಲಿ ಮೃತದೇಹಗಳು ಬಿದ್ದುಕೊಂಡಿರುವುದನ್ನು ಸಿನೆಮ ಶೂಟಿಂಗ್‌ನ ಸೆಟ್ ಎಂದು ಬಿಂಬಿಸಿದ ಫೋಟೋ ಮತ್ತು ಅದಕ್ಕೆ ‘ಬುಚಾ ನಗರದಲ್ಲಿ ನಡೆಯುತ್ತಿರುವ ಸಿನೆಮ ಚಿತ್ರೀಕರಣದ ದೃಶ್ಯ’ ಎಂದು ಶೀರ್ಷಿಕೆ ನೀಡಿ ಫ್ರಾನ್ಸ್‌ನಲ್ಲಿರುವ ರಶ್ಯಾದ ರಾಯಭಾರಿ ಕಚೇರಿ ಟ್ವೀಟ್ ಮಾಡಿತ್ತು. ಕೆಲ ಸಮಯದ ಬಳಿಕ ಅದನ್ನು ಡಿಲೀಟ್ ಮಾಡಿತ್ತು. ಬುಚಾದಲ್ಲಿನ ದೌರ್ಜನ್ಯದ ವಿಷಯಕ್ಕೆ ಸಂಬಂಧಿಸಿ ರಶ್ಯದ ರಾಯಭಾರಿ ಕಚೇರಿ ಅಪ್‌ಲೋಡ್ ಮಾಡಿರುವ ಅಸಭ್ಯ ಮತ್ತು ಪ್ರಚೋದನಕಾರಿ ಟ್ವೀಟ್‌ನ ಹಿನ್ನೆಲೆಯಲ್ಲಿ ರಾಯಭಾರಿಯನ್ನು ಕರೆಸಿಕೊಂಡು ವಿವರಣೆ ಪಡೆಯಲು ನಿರ್ಧರಿಸಲಾಗಿದೆ ಎಂದು ಫ್ರಾನ್ಸ್‌ನ ವಿದೇಶ ಸಚಿವ ಜೀನ್ ಯುವೆಸ್ ಲೆಡ್ರಿಯಾನ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News