×
Ad

ದೈವಸ್ಥಾನದ ಕಾಣಿಕೆ ಡಬ್ಬಿ ಕಳವು

Update: 2022-04-08 20:50 IST

ಕಾರ್ಕಳ : ದುರ್ಗಾ ಗ್ರಾಮದ ನಾರ್ಕಟ್ಟು ರಸ್ತೆ ಬದಿಯ ಬ್ರಹ್ಮಶ್ರೀ ಹನಿಮೊಗೇರ ದೈವಸ್ಥಾನದ ಹೊರಗಡೆ ಜಗಲಿಯಲ್ಲಿ ಇರಿಸಿದ್ದ ಕಾಣಿಕೆ ಡಬ್ಬಿ ಕಳವು ಆಗಿರುವ ಘಟನೆ ಎ.೮ರಂದು ಬೆಳಗ್ಗೆ ನಡೆದಿದೆ.

ಮಿಯ್ಯಾರು ಗ್ರಾಮದ ಕುರ್ಕಾಲು ಪಲ್ಕೆಯ ಗೋಪಾಲ ಮೇರ ಎಂಬಾತ ಕಾಣಿಕೆ ಡಬ್ಬಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಕಾಣಿಕೆ ಡಬ್ಬಿಯಲ್ಲಿ ೩೦೦-೪೦೦ರೂ. ಇರಬಹುದೆಂದು ಅಂದಾ ಜಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News