ಮೆಟ್ರೊ: ಡಿಪಿಆರ್ ಟೆಂಡರ್ ಗೆ ಆಹ್ವಾನ

Update: 2022-04-12 18:38 GMT

ಬೆಂಗಳೂರು, ಎ.12: ಹೆಬ್ಬಾಳ ಮತ್ತು ಸರ್ಜಾಪುರ ನಡುವಿನ ಮೆಟ್ರೊ ಮಾರ್ಗಕ್ಕೆ ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಲು ಬಿಎಂಆರ್‍ಸಿಎಲ್ ಟೆಂಡರ್ ಆಹ್ವಾನಿಸಿದೆ. 

ರಾಜ್ಯ ಸರಕಾರ ಬಜೆಟ್‍ನಲ್ಲಿ ಘೋಷಣೆ ಮಾಡಿದ ಒಂದು ತಿಂಗಳ ಅವಧಿಯಲ್ಲೇ ಡಿಪಿಆರ್‍ಗೆ ಟೆಂಡರ್ ಪ್ರಕ್ರಿಯೆಯನ್ನು ಬಿಎಂಆರ್‍ಸಿಎಲ್ ಆರಂಭಿಸಿದೆ. ಬಿಡ್ಡುದಾರರು ಮೇ 17ರೊಳಗೆ ತಾಂತ್ರಿಕ ಮತ್ತು ಹಣಕಾಸು ಬಿಡ್ ಸಲ್ಲಿಸಬೇಕು. 

ಡಿಪಿಆರ್ ಸಿದ್ಧಪಡಿಸಲು 8 ತಿಂಗಳ ಗಡುವು ನಿಗದಿಪಡಿಸಲು ಬಿಎಂಆರ್‍ಸಿಎಲ್ ಉದ್ದೇಶಿಸಿದೆ. 15 ಸಾವಿರ ಕೋಟಿ ಅಂದಾಜು ವೆಚ್ಚದ 37 ಕಿಲೋ ಮೀಟರ್ ಉದ್ದದ ಈ ಮಾರ್ಗವು ಅಗರ, ಕೋರಮಂಗಲ, ಡೇರಿ ವೃತ್ತದ ಮೂಲಕ ಹಾದುಹೋಗಲಿದೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News