ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿದ ಬೆಂಗಳೂರು ವಿವಿ

Update: 2022-04-12 18:40 GMT

ಬೆಂಗಳೂರು, ಎ.12: ಬೆಂಗಳೂರು ವಿಶ್ವವಿದ್ಯಾಲಯದ ಎಪ್ರಿಲ್ ಹಾಗೂ ಮೇ 2022ರ ಎಲ್ಲಾ ಸ್ನಾತಕೋತ್ತರ ಪದವಿಯ 3ನೇ ಸೆಮಿಸ್ಟರ್ ಪರೀಕ್ಷೆಗಳು, ಎಂಬಿಎ(ದಿನ ಮತ್ತು ಸಂಜೆ) ಒಳಗೊಂಡಂತೆ, ಎಂಸಿಎ 3 ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಗಳು ಹಾಗೂ ಜೈವಿಕ ವಿಜ್ಞಾನ ಬಿ.ಎಸ್ಸಿ/ಎಂ.ಎಸ್ಸಿ 3,5,7,9ನೇ ಸೆಮಿಸ್ಟರ್ ಐದು ವರ್ಷದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಬೆಂಗಳೂರು ವಿವಿ ಪ್ರಕಟನೆಯಲ್ಲಿ ತಿಳಿಸಿದೆ. 

ಪರಿಷ್ಕøತ ವೇಳಾಪಟ್ಟಿಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಉಲ್ಲೇಖಿಸಿದ್ದು, ಪರೀಕ್ಷೆಯನ್ನು ಮುಂದೂಡಲು ನಿಖರ ಕಾರಣವನ್ನು ಎಂದಿನಂತೆ ಪ್ರಕಟನೆಯಲ್ಲಿ ವಿವಿಯು ಸ್ಪಷ್ಟಪಡಿಸಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News