ಉಳ್ಳಾಲ : ಅಂಬೇಡ್ಕರ್ ಜಯಂತಿ ಆಚರಣೆ, 94 ಸಿಸಿ ಹಕ್ಕು ಪತ್ರ ವಿತರಣೆ
ಉಳ್ಳಾಲ: ಅಂಬೇಡ್ಕರ್ ರವರ ಸಂವಿಧಾನ ವನ್ನು ನಾವು ತಳಮಟ್ಟದಿಂದ ಅಳವಡಿಸಿಕೊಂಡು ಬರಬೇಕು. ವಿವಿಧತೆಯಲ್ಲಿ ಏಕತೆ ಸಂಸ್ಕೃತಿ ಇರುವ ದೇಶವಾದ ಭಾರತ ಈಗ ವಿಶ್ವಕ್ಕೆ ಮಾದರಿ ಆಗಿದೆ.ಜನರು ನೆಮ್ಮದಿ ಯಿಂದ ಬದುಕಲು ಅವಕಾಶ ಇದ್ದರೆ ಮಾತ್ರ ದೇಶ ಬಲಿಷ್ಠ ಆಗಲು ಸಾಧ್ಯ.ಇದಕ್ಕೆ ಸರ್ಕಾರ ಮೊದಲು ಅವಕಾಶ ಮಾಡಿ ಸಹಕಾರ ಕೊಡಬೇಕು ಎಂದು ಶಾಸಕ ಯುಟಿ ಖಾದರ್ ಹೇಳಿದರು.
ಅವರು ಕಂದಾಯ ಇಲಾಖೆ ಹಾಗೂ ಬೆಳ್ಮ ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ ಬೆಳ್ಮ ಪಂಚಾಯತ್ ವಠಾರದಲ್ಲಿ ಗುರುವಾರ ನಡೆದ ಅಂಬೇಡ್ಕರ್ ಜಯಂತಿ ಆಚರಣೆ ಹಾಗೂ 94 ಸಿಸಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ದಲ್ಲಿ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು.
ಬೆಳ್ಮ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ಸತ್ತಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಬೆಳ್ಮ ಗ್ರಾ.ಪಂ. ಕಚೇರಿಯಲ್ಲಿ ಕಂದಾಯ ಕಚೇರಿ ಹಾಗೂ ಕೆಎಸ್ ಹೆಗ್ಡೆ ಆಡಳಿತ ನಿರ್ದೇಶಕ ವಿಶಾಲ್ ಹೆಗ್ಡೆ ಯವರು ಕೊಡುಗೆ ನೀಡಿದ ಸೋಲಾರ್ ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಉಳ್ಳಾಲ ತಾಲೂಕು ತಹಶೀಲ್ದಾರ್ ಗುರುಪ್ರಸಾದ್, ಮಂಗಳೂರು ತಾ.ಪಂ.ಮಾಜಿ ಅಧ್ಯಕ್ಷ ಮೋನು, ಬೆಳ್ಮ ಗ್ರಾ.ಪಂ. ಮಾಜಿ ಅಧ್ಯಕ್ಷ ಉಸ್ಮಾನ್, ಯೂಸುಫ್ ಬಾವಾ, ಬೆಳ್ಭ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನವೀನ್ ಹೆಗ್ಡೆ , ಉಪಾಧ್ಯಕ್ಷ ರಮ್ಲತ್, ಸದಸ್ಯ ರಾದ ರಝಾಕ್ ದೇರಳಕಟ್ಟೆ, ಇಕ್ಬಾಲ್ ದೇರಳಕಟ್ಟೆ, ಅಲಿಮಮ್ಮ ಸುಂದರಿ , ವಿಜಯ್, ಅಬ್ದುಲ್ಲಾ, ಹನೀಫ್, ಇಬ್ರಾಹಿಂ, ರವೂಫ್ ಮತ್ತಿತರರು ಉಪಸ್ಥಿತರಿದ್ದರು.