ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮುಂದಿನ ವಾರ ಭಾರತಕ್ಕೆ ಭೇಟಿ

Update: 2022-04-17 06:09 GMT

ಲಂಡನ್: ಉಕ್ರೇನ್‌ನಲ್ಲಿ ರಶ್ಯ ನಡೆಸುತ್ತಿರುವ ಯುದ್ಧದ ಬಗ್ಗೆ ತಟಸ್ಥ ನಿಲುವು ತಳೆದಿರುವ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವ್ಯಾಪಾರ ಹಾಗೂ  ಭದ್ರತೆ ಕುರಿತು ಚರ್ಚಿಸಲು ಬ್ರಿಟನ್  ಪ್ರಧಾನಿ ಬೋರಿಸ್ ಜಾನ್ಸನ್ ಮುಂದಿನ ವಾರ ಭಾರತಕ್ಕೆ ತೆರಳಲಿದ್ದಾರೆ.

"ನಾವು ನಿರಂಕುಶಾಧಿಕಾರದ ರಾಜ್ಯಗಳಿಂದ ನಮ್ಮ ಶಾಂತಿ ಹಾಗೂ  ಸಮೃದ್ಧಿಗೆ ಬೆದರಿಕೆಗಳನ್ನು ಎದುರಿಸುತ್ತಿರುವಾಗ  ಪ್ರಜಾಪ್ರಭುತ್ವ ಮತ್ತು ಸ್ನೇಹಿತರು ಒಟ್ಟಿಗೆ ನಿಲ್ಲುವುದು ಮಹತ್ವಪೂರ್ಣವಾಗಿದೆ" ಎಂದು ಜಾನ್ಸನ್ ಭಾರತ ಭೇಟಿಯ ಮೊದಲು ಹೇಳಿಕೆಯಲ್ಲಿ ತಿಳಿಸಿದರು.

ಬ್ರಿಟಿಷ್ ಪ್ರಧಾನಿಯಾಗಿ ಭಾರತಕ್ಕೆ ಅವರ ಮೊದಲನೆಯ ಭೇಟಿಯಾಗಿದೆ.

ಉಕ್ರೇನ್ ಮೇಲೆ ರಶ್ಯದ ಆಕ್ರಮಣದ ಬಗ್ಗೆ ಬ್ರಿಟನ್ ಹಾಗೂ  ಭಾರತ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿವೆ. ಲಂಡನ್ ಮಾಸ್ಕೋದ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ ಹಾಗೂ ಕೀವ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ.  ಮೋದಿ ಸರಕಾರವು ರಶ್ಯವನ್ನು ಬಹಿರಂಗವಾಗಿ ಖಂಡಿಸಲಿಲ್ಲ ಅಥವಾ ಮಾಸ್ಕೋದ "ಆಕ್ರಮಣ" ವನ್ನು ಖಂಡಿಸಿದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮತವನ್ನು ಬೆಂಬಲಿಸಲಿಲ್ಲ.

 ಎಪ್ರಿಲ್ 21-22 ರ ಭೇಟಿಯು "ನಮ್ಮ ಎರಡೂ ರಾಷ್ಟ್ರಗಳ ಜನರಿಗೆ ಉದ್ಯೋಗ ಸೃಷ್ಟಿ ಹಾಗೂ  ಆರ್ಥಿಕ ಬೆಳವಣಿಗೆಯಿಂದ ತೊಡಗಿ ಇಂಧನ ಭದ್ರತೆ ಮತ್ತು ರಕ್ಷಣೆಯವರೆಗೆ ನಿಜವಾಗಿಯೂ ಮುಖ್ಯವಾದ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ’’ ಎಂದು ಜಾನ್ಸನ್  ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News