×
Ad

ಮಂಗಳೂರಿಗೆ ಲಗ್ಗೆ ಇಟ್ಟ ಹೋಂಡಾ ಬಿಗ್‍ವಿಂಗ್ ಸಿಬಿ350‌ ಆರ್.ಎಸ್

Update: 2022-04-18 16:55 IST

ಮಂಗಳೂರು: ಮೋಜು ಹಾಗೂ ಸಾಹಸಪ್ರಿಯ ಬೈಕ್ ಸವಾರರ ಕನಸಿನ ಬೈಕ್‍ಗಳನ್ನು ಇದೀಗ ಮನೆ ಬಾಗಿಲಲ್ಲೇ ಪಡೆಯಲು ಅವಕಾಶವಿದ್ದು, ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಲಿಮಿಟೆಡ್ ತನ್ನ ಪ್ರಿಮಿಯಂ ಬೈಕ್‍ಗಳ ಶೋರೂಂ ಹೋಂಡಾ ಬಿಗ್‍ವಿಂಗ್ ಅನ್ನು ಮಂಗಳೂರಿನಲ್ಲಿ ಆರಂಭಿಸಿದೆ.

ಕೊಟ್ಟಾರ ಚೌಕಿಯಲ್ಲಿರುವ ಕಾಂಚನ ಹೋಂಡಾದಲ್ಲಿ ಈ ಬಿಗ್‍ವಿಂಗ್ ಕಾರ್ಯ ನಿರ್ವಹಿಸುತ್ತಿದ್ದು, ಪ್ರಿಮಿಯಂ ಬೈಕ್ ಆಕಾಂಕ್ಷಿಗಳು ಸಿಬಿ350‌ ಆ‌ರ್.ಎಸ್ ಸೇರಿದಂತೆ ಪ್ರಿಮಿಯಂ ಬೈಕ್‍ಗಳ ವೀಕ್ಷಣೆ, ವಿವರ ಪಡೆಯುವುದು, ಪರೀಕ್ಷಾರ್ಥ ಸವಾರಿ ಜತೆಗೆ ಖರೀದಿಗೆ ಆಕರ್ಷಕ ಹಣಕಾಸು ಯೋಜನೆಗಳ ಸೌಲಭ್ಯವನ್ನೂ ಪಡೆಯಬಹುದಾಗಿದೆ ಎಂದು ಪ್ರಕಟಣೆ ಹೇಳಿದೆ.

ಶೇಕಡ 100ರವರೆಗೆ ಹಣಕಾಸು ನೆರವು, ಅತ್ಯಂತ ಕಡಿಮೆ ಅಂದರೆ ಶೇಕಡ 5.9ರ ಬಡ್ಡಿದರ ಮತ್ತು ನಿಮ್ಮ ಹಳೆಯ ದ್ವಿಚಕ್ರ ವಾಹನಗಳ ವಿನಿಮಯಕ್ಕೆ ಅತ್ಯುತ್ತಮ ದರ ಸೇರಿದಂತೆ ಹಲವು ವಿಶೇಷ ಸೌಲಭ್ಯಗಳನ್ನು ಗ್ರಾಹಕರು ಪಡೆಯಬಹುದಾಗಿದೆ.

ಪ್ರೀಮಿಯಂ ಮೋಟಾರ್‌ ಸೈಕಲ್ ಗ್ರಾಹಕರಿಗೆ ವಿಭಿನ್ನವಾದ ತಲ್ಲೀನಗೊಳಿಸುವ ಅನುಭವ, ವಿಶೇಷ ಶ್ರೇಣಿಯ ಪ್ರೀಮಿಯಂ ಮೋಟಾರ್ ಸೈಕಲ್ (300 ಸಿಸಿ- 500 ಸಿಸಿ) ಸವಾರಿ ಮಾಡುವ ಉತ್ಸಾಹಿಗಳಿಗೆ ವಿಶೇಷ ಸಂತಸ, ಹೋಂಡಾ ದೊಡ್ಡ ಬೈಕ್‍ಗಳಿಗಾಗಿ ವಿಶೇಷವಾದ ಒಂದೇ ನಿಲುಗಡೆಯ ಮಾರಾಟ ಮತ್ತು ಸೇವಾ ಕೇಂದ್ರ ಇದರ ವಿಶೇಷತೆಯಾಗಿರುತ್ತದೆ.‌

ಗ್ರಾಹಕರ ಉತ್ಪನ್ನ ಅಥವಾ ಪರಿಕರಗಳ ಬಗೆಗಿನ ಸಂಬಂಧಿತ ಪ್ರಶ್ನೆಗಳನ್ನು ಪರಿಹರಿಸಲು ಬಿಗ್‍ವಿಂಗ್‍ನಲ್ಲಿ ಉತ್ತಮ ತರಬೇತಿ ಪಡೆದ ಜ್ಞಾನವುಳ್ಳ ವೃತ್ತಿಪರರು ಇರುತ್ತಾರೆ. ಹುಡುಕಾಟದಿಂದ ಹಿಡಿದು ಖರೀದಿ ವರೆಗಿನ ಪ್ರಯಾಣವನ್ನು ಸರಾಗಗೊಳಿಸುವ, ಮೀಸಲಾದ ವೆಬ್‍ಸೈಟ್ (www.hondabigwing.in) ಎಲ್ಲಾ ವಿವರವಾದ ಮಾಹಿತಿಗಾಗಿ ಲಭ್ಯವಿದೆ.

ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಬುಕಿಂಗ್ ಆಯ್ಕೆಯು ಗ್ರಾಹಕರಿಗೆ ತಮ್ಮ ಬೆರಳ ತುದಿಯಲ್ಲಿ ತ್ವರಿತ, ತಡೆರಹಿತ ಮತ್ತು ಪಾರದರ್ಶಕ ಬುಕಿಂಗ್ ಅನುಭವವನ್ನು ಖಾತ್ರಿಗೊಳಿಸುತ್ತದೆ. ನೈಜ ಸಮಯದಲ್ಲಿ ಗ್ರಾಹಕರ ಪ್ರತಿಕ್ರಿಯೆ ಯನ್ನು ಸೆರೆಹಿಡಿಯುವುದು, ಹೋಂಡಾ ಬಿಗ್‍ವಿಂಗ್ ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯವಾಗಿ ಲಭ್ಯವಿದೆ.

ಸಿಬಿ350 ಆರ್.ಎಸ್ ಬಗ್ಗೆ‌

ಸಿಬಿ 350ಆರ್.ಎಸ್, ಹೋಂಡಾ ಸಿಬಿ ಸಮೂಹದಲ್ಲಿ ಮೋಟರ್‌ ಸೈಕಲ್‍ಗಳ ಎರಡನೇ ಹೊಸ ಕೊಡುಗೆಯಾಗಿದ್ದು, ಕಳೆದ ಅಕ್ಟೋಬರ್‌ ನಲ್ಲಿ ಪರಿಚಯಿಸಲಾದ ಐಯೆನ್ಸ್ ಸಿಬಿ 350 ಬೈಕ್‍ನ ನಂತರ ಮೇಡ್ ಇನ್ ಇಂಡಿಯಾ ಫಾರ್ ದಿ ವಲ್ಡ್ ಸರಣಿಯ ಬೈಕ್ ಆಗಿದೆ ಸಿಬಿ 350ಆರ್.ಎಸ್ ಸಮಕಾಲೀನ ಶೈಲಿ ಮತ್ತು ಉತ್ತಮ ಸವಾರಿ ಅನುಭವ ನೀಡುವ ಮೂಲಕ ಗ್ರಾಹಕರಿಗೆ ಮೌಲ್ಯ ಹೆಚ್ಚಿಸುತ್ತದೆ.

ಹೋಂಡಾ ಸಿಬಿ350 ಆರ್.ಎಸ್ ಹೊಸ ಮೊನೊಟೋನ್ ನೀಲಿ ಛಾಯೆಯು ಪರ್ಲ್ ಸ್ಪೋರ್ಟ್ಸ್ ಹಳದಿ ಮತ್ತು ರೇಡಿಯಂಟ್ ರೆಡ್ ಮೆಟಾಲಿಕ್ ಬಣ್ಣದ ಆಯ್ಕೆಗಳೊಂದಿಗೆ ಕಪ್ಪು ಸೇರಿದಂತೆ ಈ ಮೊದಲೇ ಅಸ್ತಿತ್ವದಲ್ಲಿರುವ ಬಣ್ಣದ ಪ್ಯಾಲೆಟ್‍ಗಳನ್ನು ಸೇರಲಿದೆ.‌

ಸಿಬಿ350ಆರ್.ಎಸ್ ಬೆಲೆ ರೂ. 1,98,230ರಿಂದ ಆರಂಭವಾಗಲಿದ್ದು, 2 ಅವತರಣಿಕೆ ಮತ್ತು 3 ಬಣ್ಣಗಳಲ್ಲಿ ಲಭ್ಯ. ಅಗ್ರ ಅವತರಣಿಕೆಯ ಬೆಲೆ 2,00,282ರಿಂದ ಆರಂಭವಾಗುತ್ತದೆ. ಇದು 348 ಬಿಎಚ್‍ಪಿ ಮತ್ತು 30 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಈ ಆಕರ್ಷಕ ಬೈಕ್ ಒಂದೇ ಫ್ರೇಮ್, ಎಂಜಿನ್ ಮತ್ತು 348.3ಸಿಸಿ, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‍ನಿಂದ ಚಾಲಿತವಾಗಿದ್ದು, 21 ಪಿಎಸ್ ಪವರ್ ಉತ್ಪತ್ತಿ ಮಾಡುತ್ತವೆ ಮತ್ತು ಇವುಗಳನ್ನು 5-ಸ್ಪೀಡ್ ಗೇರ್‌ ಬಾಕ್ಸ್‌ ಗೆ ಜೋಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News