×
Ad

ತೆಂಕನಿಡಿಯೂರು ಕಾಲೇಜಿಗೆ 3 ಪ್ರಥಮ ರ‍್ಯಾಂಕ್ ಸಹಿತ 6 ರ‍್ಯಾಂಕ್

Update: 2022-04-18 18:24 IST
ರಜನಿ, ದೀಪಿಕ, ರಕ್ಷಿತ
ಕಾವ್ಯ, ಸಾಂಘವಿ, ಪ್ರತೀಕ್ಷಾ
 

ಉಡುಪಿ : ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ ಸ್ನಾತಕೋತ್ತರ ಪರೀಕ್ಷೆಗಳಲ್ಲಿ ಮೂರು ಪ್ರಥಮ ರ‍್ಯಾಂಕ್ ಸಹಿತ ಒಟ್ಟು 6 ರ‍್ಯಾಂಕ್ ಗಳನ್ನು ಗಳಿಸಿದೆ.

ಕನ್ನಡ ವಿಭಾಗದ ರಜನಿ ಕನ್ನಡ ಎಂ.ಎ. ಯಲ್ಲಿ ಪ್ರಥಮ ರ‍್ಯಾಂಕ್,  ಇತಿಹಾಸ ವಿಭಾಗದಲ್ಲಿ ರಕ್ಷಿತಾ ಇತಿಹಾಸ ಎಂ.ಎ. ಪ್ರಥಮ ರ‍್ಯಾಂಕ್, ದೀಪಿಕಾ ಸಮಾಜಶಾಸ್ತ್ರ ಎಂ.ಎ.ಯಲ್ಲಿ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ. ಉಳಿದಂತೆ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಕಾವ್ಯ ಕೆ.ಬಿ. 5ನೇ ರ‍್ಯಾಂಕ್, ಸಾಂಘವಿ ಉರಾಳ ಮತ್ತು ಪ್ರತೀಕ್ಷಾ ಏಳನೇ ರ‍್ಯಾಂಕ್ ಗಳನ್ನು ಪಡೆದಿದ್ದಾರೆ.

ಅಲ್ಲದೇ ಕಾಲೇಜಿನ ವಿದ್ಯಾರ್ಥಿಗಳು ಐದು ಚಿನ್ನದ ಪದಕ ಹಾಗೂ 10 ನಗದು ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ಗಣನಾಥ ಎಕ್ಕಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿನ್ನದ ಪದಕಗಳು: ರಜನಿ, ಕನ್ನಡ ಎಂಎಯಲ್ಲಿ ಧರ್ಮಸ್ಥಳ ರತ್ನವರ್ಮ ಹೆಗ್ಡೆ ಸ್ಮಾರಕ ಚಿನ್ನದ ಪದಕ. ರಕ್ಷಿತಾ, ಇತಿಹಾಸ ಎಂಎಯಲ್ಲಿ ದಿ.ಡಾ. ಪಾದೂರು ಗುರುರಾಜ ಭಟ್ ಸ್ಮಾರಕ 2 ಚಿನ್ನದ ಪದಕಗಳು. ದೀಪಿಕಾ, ಸಮಾಜಶಾಸ್ತ್ರ ಎಂಎಯಲ್ಲಿ ಜಯರಾವ್ ಬಲ್ಲಾಳ್ ಸ್ಮಾರಕ ಚಿನ್ನದ ಪದಕ ಮತ್ತು ಪ್ರೊ. ಜೋಗನ್ ಶಂಕರ್ ಚಿನ್ನದ ಪದಕಗಳು.

ನಗದು ಬಹುಮಾನ: ರಜನಿ -ಕನ್ನಡ ಎಂಎ ವಸಂತ ಅನಂತ ನಾರಾಯಣ ಮತ್ತು ಎಸ್. ಅನಂತ ನಾರಾಯಣ ನಗದು ಬಹುಮಾನ. ಎಂ.ಎಸ್. ಪುಟ್ಟಣ್ಣ ಎರಡು ನಗದು ಬಹುಮಾನ.  ಕನ್ನಡ ಸಿನಿಮಾ ಉತ್ಸವ ಸುವರ್ಣ ಹಬ್ಬದ ನಗದು ಬಹುಮಾನ, ಕೆರಾಡಿ ಸುಬ್ಬರಾವ್ ಸ್ಮಾರಕ ನಗದು ಬಹುಮಾನ, ಡಾ. ಬಿ.ದಾಮೋದರ ರಾವ್ ನಗದು ಬಹುಮಾನ.

ರಕ್ಷಿತಾ- ಇತಿಹಾಸ ಎಂಎ ಪಾದೂರು ರಾಜ ಭಟ್ ಸ್ಮಾರಕ ನಗದು ಬಹುಮಾನ, ಡಾ.ಎಂ.ವಿ.ಶೆಟ್ಟಿ ಸ್ಮಾರಕ ಮತ್ತು ಪ್ರೊ.ಶೇಕ್‌ ಅಲಿ ಅಭಿನಂದನಾ ಸಮಿತಿಯ ನಗದು ಬಹುಮಾನ. ನಿತಿನ್- ಇತಿಹಾಸ ಎಂಎ ವಸಂತ ಎಸ್. ಅನಂತ ನಾರಾಯಣ ಮತ್ತು ಎಸ್.ಅನಂತ ನಾರಾಯಣ ನಗದು ಬಹುಮಾನ. ದೀಪಿಕಾ- ಸಮಾಜಶಾಸ್ತ್ರ ಎಂಎ ವಿಮೋಚನಾ ದೇವದಾಸಿ ಪುನರ್‌ ವಸತಿ ಸಂಘ ಅಥಣಿ ನಗದು ಬಹುಮಾನ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News