×
Ad

ರಿಕ್ಷಾದಲ್ಲಿ ದನದ ಮಾಂಸ ಸಾಗಾಟ: ಆರೋಪಿ ವಶಕ್ಕೆ

Update: 2022-04-18 22:21 IST

ಕೊಣಾಜೆ: ಕೇರಳದಿಂದ‌ ಮಂಗಳೂರಿಗೆ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ  ರಿಕ್ಷಾವೊಂದನ್ನು ಕೊಣಾಜೆ ಪೊಲೀಸರು ಅಸೈಗೋಳಿಯಲ್ಲಿ ತಡೆದು‌ ನಿಲ್ಲಿಸಿ ಆರೋಪಿಯನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ಆರೋಪಿಯನ್ನು ಕೇರಳ ಮೂಲದ ರಿಯಾಝ್ (32) ಎಂದು ಗುರುತಿಸಲಾಗಿದೆ.

ಕೇರಳದಿಂದ ಮಂಗಳೂರು ಭಾಗದಲ್ಲಿ ಮಾರಾಟ ಮಾಡಲು ಆರೋಪಿ ದನದ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಎನ್ನಲಾಗಿದ್ದು, ಈ ಬಗ್ಗೆ ಮಾಹಿತಿ ಪಡೆದ ಕೊಣಾಜೆ ಪೊಲೀಸರು ಅಸೈಗೋಳಿ ಬಳಿ ಅಟೋ ರಿಕ್ಷಾವನ್ನು‌ತಡೆದು ನಿಲ್ಲಿಸಿ ಪರಿಶೀಲಿಸಿ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News