ಪುತ್ತೂರು: ಬೈಕ್‍ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆಗೆಸೆಯಲ್ಪಟ್ಟು ಮಹಿಳೆ ಮೃತ್ಯು
Update: 2022-04-20 21:42 IST
ಪುತ್ತೂರು: ಮಹಿಳೆಯೊಬ್ಬರು ಬೈಕ್‍ನಲ್ಲಿ ಹಿಂಬದಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ರಸ್ತೆಗೆಸೆಯಲ್ಪಟ್ಟು ಮೃತಪಟ್ಟ ಘಟನೆ ಬುಧವಾರ ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ಗ್ರಾಮದ ಕೋರಿಯ ಎಂಬಲ್ಲಿ ಸಂಭವಿಸಿದೆ.
ಬೆಳ್ಳಿಪ್ಪಾಡಿ ಅಳಿಮೆ ನಿವಾಸಿ ಸೇಸಪ್ಪ ಗೌಡ ಎಂಬವರ ಪತ್ನಿ ಗಿರಿಜಾ (62) ಮೃತಪಟ್ಟ ಮಹಿಳೆ. ಗಿರಿಜಾ ಅವರು ತನ್ನ ಸಂಬಂಧಿಕ ದಿವಾಕರ ಎಂಬವರ ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆಯಲ್ಲಿ ಕೋರಿಯ ಎಂಬಲ್ಲಿ ರಸ್ತೆ ಹಂಪ್‍ನಲ್ಲಿ ಬೈಕ್‍ನಿಂದ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆತರಲಾಯಿತಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.